ಕಲಬುರಗಿ: ಕೇರಳದ ವಯನಾಡ ಭೀಕರ ದುರಂತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಶ್ಚಿಮ ಘಟ್ಟ ಪ್ರಾಧಿಕಾರ ರಚಿಸಬೇಕು. ಸೂಕ್ಷö್ಮ ಪರಿಸರ ವಲಯ ರೂಪಿಸಬೇಕು ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು. ಸಂಚಾಲಕ ನಾಗೇಂದ್ರಪ್ಪ ಬುಳ್ಳಾ ಇತರರಿದ್ದರು.