ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಸಂಸದೆ ಮಂಗಲ ಅಂಗಡಿ ಅವರು ಡಿಸಿ ಡಾ. ಕೆ.ಹರೀಶಕುಮಾರ ಅವರೊಂದಿಗೆ ಚರ್ಚಿಸಿದರು. ಡಿಎಚ್‌ಒ ಡಾ. ಎಸ್.ವಿ. ಮುನ್ಯಾಳ, ಡಿಸಿಪಿ ಯಶೋಧಾ ವಂಟಗೋಡಿ ಇದ್ದರು. 
ಜಿಲ್ಲೆ

ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿ

Belagavi

ಬೆಳಗಾವಿ: ಕರೊನಾ ಸೋಂಕಿತರಿಗೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯ ಹಾಗೂ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಕುರಿತು ನೂತನ ಸಂಸದೆ ಮಂಗಲ ಅಂಗಡಿ ಅವರು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಅವರೊಂದಿಗೆ ಚರ್ಚಿಸಿ, ಸೋಂಕಿತರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.

ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19ನ ಸದ್ಯದ ಸ್ಥಿತಿ, ಲಸಿಕೆ ನೀಡುವಿಕೆ, ಸೋಂಕು ಹರಡುವಿಕೆಯ ನಿಯಂತ್ರಣ, ಸೋಂಕಿತರ ಚಿಕಿತ್ಸಾ ಪ್ರಕ್ರಿಯೆ, ಮುನ್ನೆಚ್ಚರಿಕೆ ಕ್ರಮ ಸೇರಿದಂತೆ ಹಲವು ಅಂಶಗಳ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿದರು. ಡಿಎಚ್‌ಒ ಡಾ.ಎಸ್.ವಿ.ಮುನ್ಯಾಳ, ಡಿಸಿಪಿ ಯಶೋಧಾ ವಂಟಗೋಡಿ ಇತರರು ಇದ್ದರು.