ಬೆಟ್ಟದಪುರ ಸಮೀಪದ ಕಣಗಾಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಗೂರು ವಿವೇಕಾನಂದ ಸ್ಮಾರಕ ಆಸ್ಪತ್ರೆ, ಗ್ರಾಮ ಪಂಚಾಯಿತಿ ವತಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಚ್.ಕೆ ಶಂಕರ್, ಕುಮಾರಶೆಟ್ಟಿ, ಡಾ.ಬಿ.ಎಂ ಸುಜಾತಲಕ್ಷ್ಮೀ, ಡಾ.ಶಾಲಿನಿ, ವಿಶ್ವನಾಥ್ ಇದ್ದರು.  
ಜಿಲ್ಲೆ

ಸೂಕ್ತ ತಪಾಸಣೆಯಿಂದ ಸಂತಾನ ಹೀನತೆಗೆ ಪರಿಹಾರ


ಬೆಟ್ಟದಪುರ: ಮಹಿಳೆಯರಲ್ಲಿ ಕಂಡು ಬರುವ ಸಂತಾನ ಹೀನತೆಗೆ ಮಹಿಳೆ ಮಾತ್ರವಲ್ಲದೆ, ಪುರುಷರೂ ಕಾರಣವಾಗಿದ್ದು, ಸೂಕ್ತ ತಪಾಸಣೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಎಚ್.ಕೆ.ಶಂಕರ್ ತಿಳಿಸಿದರು.

ಕಣಗಾಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಗೂರು ವಿವೇಕಾನಂದ ಸ್ಮಾರಕ ಆಸ್ಪತ್ರೆ, ಗ್ರಾಪಂ ವತಿಯಿಂದ ಬುಧವಾರ ಆಯೋಜಿಸಿದ್ದ ಸಂತಾನ ಹೀನತೆ ನಿವಾರಣೆ ಕುರಿತು ಸಲಹೆ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಮಹಿಳೆಯರಲ್ಲಿ ಅಥವಾ ಪುರುಷರಲ್ಲಿನ ಸಮಸ್ಯೆಗಳನ್ನು ಸೂಕ್ತ ಚಿಕಿತ್ಸೆ ಮೂಲಕ ನಿವಾರಣೆ ಮಾಡಿಕೊಳ್ಳಬಹುದು ಎಂದರು.
ವೈದ್ಯಾಧಿಕಾರಿ ಡಾ.ಬಿ.ಎಂ.ಸುಜಾತಲಕ್ಷ್ಮೀ ಮಾತನಾಡಿ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆಯುವುದು ಮುಖ್ಯ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಕುಮಾರಶೆಟ್ಟಿ, ಸಂಸ್ಥೆಯ ವೈದ್ಯಾಧಿಕಾರಿ ಡಾ.ಶಾಲಿನಿ, ಆರೋಗ್ಯ ನಿರೀಕ್ಷಕ ವಿಶ್ವನಾಥ್, ಸಂಸ್ಥೆಯ ಮೇಲ್ವಿಚಾರಕರಾದ ರವಿತೇಜ್, ಪ್ರದೀಪ್ ಇತರರು ಇದ್ದರು.