filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5241273, 0.46635708);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ಸೂಕ್ತ ಜಾಗ ಕೊಟ್ಟು ಸುಣ್ಣದ ಗುಮ್ಮಿ ಸ್ಥಳಾಂತರಿಸಿ

ಚಿತ್ರದುರ್ಗ: ಸೂಕ್ತ ಜಾಗ, ಮೂಲ ಸೌಕರ್ಯ ಕಲ್ಪಿಸದೇ ಜೋಗಿಮಟ್ಟಿ ರಸ್ತೆಯಲ್ಲಿರುವ ಸುಣ್ಣದ ಗುಮ್ಮಿಗಳ ಸ್ಥಳಾಂತರಕ್ಕೆ ಮುಂದಾದ ನಗರಸಭೆ ನಡೆ ಖಂಡಿಸಿ ಸುಣ್ಣ ತಯಾರಕರು ಡಿಸಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜೋಗಿಮಟ್ಟಿ ರಸ್ತೆ 5ನೇ ಕ್ರಾಸ್ ಪ್ರದೇಶದಲ್ಲಿ ಅಂದಾಜು 30 ಸುಣ್ಣದ ಗುಮ್ಮಿಗಳಿದ್ದು, ಈ ಪ್ರದೇಶ ಒಂದು ಕಾಲದಲ್ಲಿ ಊರಿನ ಹೊರಭಾಗದಲ್ಲಿತ್ತು. ನಮ್ಮ ಪೂರ್ವಿಕರ ಕಾಲದಿಂದಲೂ ಸುಣ್ಣ ತಯಾರಿಸುತ್ತಾ ಜೀವನ ನಡೆಸಿಕೊಂಡು ಬಂದಿದ್ದೇವೆ. ಅಂದಾಜು 150 ಕುಟುಂಬಗಳಿಗೆ ಇದು ಆಧಾರವಾಗಿದೆ. ಅವಿದ್ಯಾವಂತರಾದ ನಾವು ಅರ್ಧ ಆಯಸ್ಸು ಈ ವೃತ್ತಿಯಲ್ಲೇ ಕಳೆದಿದ್ದೇವೆ. ಈಗ ನಗರ ಬೆಳೆದಂತೆ ಊರಿನ ಮಧ್ಯಭಾಗದಲ್ಲಿ ಸುಣ್ಣದ ಗುಮ್ಮಿಗಳಿವೆ. ಈ ಮೊದಲೇ ಹಲವು ಭಾರಿ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಪರ್ಯಾಯ ಜಾಗಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಆದರೂ ನಗರಸಭೆ ಪೌರಾಯುಕ್ತರು ನೋಟಿಸ್ ನೀಡದೆ ಏಕಾಏಕಿ ಸುಣ್ಣದ ಗುಮ್ಮಿಗಳನ್ನು ಕೆಡವಲು ಮುಂದಾಗಿರುವುದನ್ನು ಖಂಡಿಸುತ್ತೇವೆ. ಸೂಕ್ತ ಜಾಗ ಮತ್ತು ಸೌಲಭ್ಯ ಒದಗಿಸಿದರೆ ಸ್ಥಳಾಂತರ ಮಾಡುತ್ತೇವೆ ಎಂದು ಹಿಂದೆ ಹೊಳಲ್ಕೆರೆ ರಸ್ತೆಯಲ್ಲಿದ್ದ ಮಂಡಕ್ಕಿ ಭಟ್ಟಿಗಳನ್ನು ಹಳೆ ಬೆಂಗಳೂರು ರಸ್ತೆಗೆ ಮೂಲ ಸೌಲಭ್ಯಗಳೊಂದಿಗೆ ಸ್ಥಳಾಂತರಿಸಿರುವುದನ್ನು ಉದಾಹರಿಸಿದರು.

ಸೌಲಭ್ಯ, ನಿವೇಶನ ಒದಗಿಸದೆ ಸ್ಥಳಾಂತರಕ್ಕೆ ಮುಂದಾದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದ ಪ್ರತಿಭಟನಕಾರರು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರಸಭೆ ಮಾಜಿ ಸದಸ್ಯ ಮಹೇಶ್, ಮುಖಂಡರಾದ ರಾಜಣ್ಣ, ಸಿದ್ದರಾಜು, ಗೋಪಿ, ನಾಗರಾಜು, ಶಿವು, ಬಸವರಾಜು, ನಿಂಗರಾಜು, ತಿಪ್ಪೇರುದ್ರಪ್ಪ, ರಾಘವೇಂದ್ರ, ಜಯಣ್ಣ, ರೇಖಾ, ಕರಿಬಸಮ್ಮ, ಸಿಂಧೂ, ರಾಧಮ್ಮ, ಜ್ಯೋತಿ, ಶೈಲಾ, ಕಮಲಮ್ಮ, ಕಾವೇರಿ, ಸುಮಕ್ಕ, ಭೂಮಿಕಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.