ಚಿಕ್ಕಮಗಳೂರು: ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಸುಸ್ಥಿರದಾರರ ಅಸಲು ಬಡ್ಡಿಯಲ್ಲಿ ರಿಯಾಯಿತಿ ನೀಡುವ ಜೊತೆಗೆ ಹೆಚ್ಚು ಕಾಲಾವಕಾಶ ಒದಗಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಉಪ್ಪಳ್ಳಿ ಕೆ.ಭರತ್ ಮಾತನಾಡಿ, ಮೂಡಿಗೆರೆ ಬ್ಯಾಂಕ್, ಕೆನರಾ ಬ್ಯಾಂಕ್, ಕಳಸ, ಚಿಕ್ಕಮಗಳೂರು ಹಾಗೂ ಗವನಹಳ್ಳಿ ಶಾಖೆಗಳ ಕೆಲವು ಸುಸ್ಥಿದಾರರುಗಳು ಕಾಫಿ ಹಾಗೂ ಕೃಷಿ ಭೂಮಿ ಸೇರಿದಂತೆ ಇನ್ನಿತರೆ ಆಸ್ತಿಗಳನ್ನು ಮುಂದೂಡಿರುವುದು ಸ್ವಾಗತಿಸುತ್ತೇವೆ ಎಂದರು.
ಆದರೆ ಸುಸ್ತಿದಾರರಿಗೆ ಆರು ತಿಂಗಳ ಕಾಲಾವಕಾಶ ನೀಡಿದ್ದು, ಅವಧಿ ಪೂರ್ಣಗೊಂಡ ನಂತರ ಏಕಾಏಕಿಯಾಗಿ ಅಸಲು ಬಡ್ಡಿಯನ್ನು ಒಮ್ಮೆಲೇ ಕಟ್ಟಬೇಕು ಎಂದಾದರೆ ಸುಸ್ತಿದಾರರು ಇನ್ನಷ್ಟು ದೊಡ್ಡ ಸಮಸ್ಯೆ ಗಳಿಗೆ ಸಿಲುಕಬೇಕಾಗುತ್ತದೆ ಎಂದು ಹೇಳಿದರು.
ಕಳೆದ ಆರೇಳು ವರ್ಷಗಳಿಂದ ನಾನಾ ರೀತಿಯಾದ ಮಾರಣಾಂತಿಕ ಕಾಯಿಲೆ, ಪ್ರಕೃತಿ ವಿಕೋಪ, ಅತಿ ವೃಷ್ಟಿ, ಅನಾವೃಷ್ಟಿ ಸೇರಿದಂತೆ ಎಲ್ಲಾ ರೀತಿಯ ಬೆಳೆಗಾರರು, ಕೃಷಿಕರು, ವ್ಯಾಪಾರಸ್ಥರು, ವ್ಯವಹಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಓಟಿಎಸ್‌ನಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ನೀಡುವುದರೊಂದಿಗೆ ಹಣವನ್ನು ಮರುಪಾವತಿಸಲು ೪ ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು. ವಿಕೋಪಗಳನ್ನು ಮನಗಂಡು ರಿಯಾಯಿತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರ ತೊಂದರೆಗೆ ಒಳಪಟ್ಟವರ ಸಂಪೂರ್ಣ ಬಡ್ಡಿಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ ಕೋಟ್ಯಾಂತರ ರೂ. ಮನ್ನಾ ಮಾಡಿರುವ ಉದಾಹರಣೆಯಿದೆ. ಹೀಗಾಗಿ ಕೃಷಿಕರು, ರೈತರು, ಸಣ್ಣ ಉದ್ದಿಮೆ ವ್ಯಾಪಾರಸ್ಥರು ಸಾಲ ಮರುಪಾವತಿಸಲಾಗದೇ ಅಲ್ಪಸ್ವಲ್ಪ ಆಸ್ತಿಗಳನ್ನು ಉಳಿಸಿಕೊಳ್ಳಲಾಗದೇ, ಗೌರವ ಮರ್ಯಾದೆಗಳಿಗೆ ಅಂಜಿ ಸಮಾಜ ದಲ್ಲಿ ಅವಮಾನಕ್ಕೆ ಒಳಗಾಗುತ್ತಿದ್ದಾರೆ ಎಂದರು.
ಆದ್ದರಿAದ ಸಾಲ ನೀಡಿರುವಂತಹ ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿಸಿ ಆಸ್ತಿ ಹಾಗೂ ಬದುಕನ್ನು ಉಳಿಸಿಕೊಡಬೇಕು. ಆ ನಿಟ್ಟಿನಲಿ ಸಂಬAಧಪಟ್ಟ ಬ್ಯಾಂಕ್‌ಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ಗಂಗಾಧರ್, ಸಮೀರ್‌ಖಾನ್, ರಾಜೇಶ್ ಮತ್ತಿತರರಿದ್ದರು.