ವಿಜಯಪುರದ ಹೊರವಲಯದಲ್ಲಿರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣನವರ ಪ್ರಮಾಣಪತ್ರ ವಿತರಿಸಿದರು. ಸಾಮಾಜಿಕ ಕಾರ್ಯಕರ್ತೆ ರೇಣುಕಾ ಸದಸಪ್ಪಗೋಳ, ಡಾ. ಎಸ್. ವಿಜಯ್ ಆತನೂರ ಹಲವರು ಉಪಸ್ಥಿತರಿದ್ದರು. 
ಜಿಲ್ಲೆ

ಸುಸ್ಥಿರ ಉದ್ಯಮಿಯಾಗಲು ಕಠಿಣ ಪರಿಶ್ರಮ ಅಗತ್ಯ

ವಿಜಯಪುರ: ಉದ್ದಿಮೆದಾರರು ಮುಖ್ಯವಾಗಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಹಿಡಿದ ಕಾರ್ಯ ಮೊಟಕುಗೊಳಿಸದೇ, ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣನವರ ಹೇಳಿದರು.

ನಗರದ ಹೊರವಲಯದಲ್ಲಿರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಆಯೋಜಿಸಿದ್ದ ಸಿಹಿ ನೀರು ಅಲಂಕಾರಿಕ ಮೀನು ಸಾಕಾಣಿಕೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಗಾರ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗುರಿ, ಸಾಧನಾ ಪಥದ ನಡುವೆ ಸಮಸ್ಯೆ ಉದ್ಭವಿಸಿದರೆ ಪರಿಹಾರ ಕಂಡುಕೊಂಡು, ಎದುರಿಸುವ ಚಾಕಚಕ್ಯತಾ ಪ್ರವೃತ್ತಿ ಹಾಗೂ ಕಷ್ಟಗಳನ್ನು ಜಯಿಸಿ, ಅವುಗಳ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳುವವರು ಮಾತ್ರ ಯಶಸ್ವಿ ಹಾಗೂ ಸುಸ್ಥಿರ ಉದ್ಯಮಿ ಎನಿಸಿಕೊಳ್ಳಬಹುದು ಎಂದರು.

ಸಾಮಾಜಿಕ ಕಾರ್ಯಕರ್ತೆ ರೇಣುಕಾ ಸದಸಪ್ಪಗೋಳ ಮಾತನಾಡಿ, ಮಹಿಳೆಯರು ಉದ್ಯಮಿಯಾದರೆ ಅವರ ಕುಟುಂಬದ ಆರ್ಥಿಕ ವ್ಯವಸ್ಥೆ ಸುಸ್ಥಿರಗೊಳ್ಳುತ್ತದೆ ಎಂದರು. ಡಾ. ಎಸ್. ವಿಜಯ್ ಆತನೂರ, 70ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.