ಜಿಲ್ಲೆ

ಸುಸ್ತಿದಾರರಿಗೆ ನಗರಸಭೆ ಬಿಗ್ ಶಾಕ್

ಯಾದಗಿರಿ : ನಾಲ್ಕು ದಶಕದಿಂದ ನಗರಸಭೆ ಮಳಿಗೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆದು ಸಕಾಲಕ್ಕೆ ಬಾಡಿಗೆ ನೀಡದೆ ಸತಾಯಿಸುತ್ತಿದ್ದ ವ್ಯಾಪಾರಸ್ಥರಿಗೆ ನಗರಸಭೆ ಬಿಗ್ ಶಾಕ್ ನೀಡಿದೆ.

ನಗರದ ಗಾಂಧಿ ವೃತ್ತ ಸೇರಿ ವಿವಿಧೆಡೆ ನಗರಸಭೆಗೆ ಸೇರಿದ ೮೮ ಮಳಿಗೆಗಳಿವೆ. ಅತ್ಯಂತ ಜನನಿಬಿಡ ಪ್ರದೇಶ ಗಾಂಧಿ ವೃತ್ತದಲ್ಲಿನ ಮಳಿಗೆಗಳಲ್ಲಿ ಹಲವು ವರ್ಷಗಳಿಂದ ಕಿರಾಣಿ ಸೇರಿ ಇತರ ವ್ಯಾಪಾರ ನಡೆಸುತ್ತ ಬರಲಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ನಗರಸಭೆ ಮಳಿಗೆಗಳನ್ನು ಬಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದ ವರ್ತಕರು, ಇತ್ತೀಚೆಗೆ ಬಾಡಿಗೆ ಕೊಡುವುದನ್ನು ಸಂಪೂರ್ಣ ನಿಲ್ಲಿಸಿದ್ದರು.

ಬಾಡಿಗೆ ನೀಡುವಂತೆ ನಗರಸಭೆ ಹಲವು ಬಾರಿ ವ್ಯಾಪಾರಸ್ಥರಿಗೆ ನೋಟಿಸ್ ನೀಡಿದರೂ ಕೆಲವರು ಕ್ಯಾರೆ ಎಂದಿರಲಿಲ್ಲ. ಅಲ್ಲದೆ ಈ ವಿಷಯ ಕೋರ್ಟ್ ಮೆಟ್ಟಿಲೇರಿ ವಿಚಾರಣೆ ನಡೆದು ಜು.೭ರಂದು ನಗರಸಭೆ ಪರವಾಗಿ ತೀರ್ಪು ಬಂದಿತ್ತು. ಇದರಿಂದ ಕಾರ್ಯಪ್ರವೃತ್ತರಾದ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಮಳಿಗೆಗಳನ್ನು ವಶಪಡಿಸಿಕೊಳ್ಳಲು ೯ ಸಿಬ್ಬಂದಿ, ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ.

ಮೊದಲ ಹಂತವಾಗಿ ಐದು ಮಳಿಗೆಗಳನ್ನು ಶನಿವಾರ ಜಪ್ತಿ ಮಾಡಿಕೊಂಡಿರುವ ಈ ತಂಡ ಮುಂದಿನ ದಾಳಿಗೆ ಸನ್ನದ್ಧವಾಗಿದೆ. ಇದರಿಂದ ಹಲವು ವರ್ಷಗಳಿಂದ ನಗರಸಭೆಗೆ ಬಾಡಿಗೆ ನೀಡದೆ ಸತಾಯಿಸುತ್ತಿದ್ದ ವ್ಯಾಪಾರಸ್ಥರಲ್ಲಿ ತೀವ್ರ ತಳಮಳ ಸೃಷ್ಠಿಯಾಗಿದೆ. ೮೮ ಮಳಿಗೆಗಳನ್ನು ಸದ್ಯದ ಮಾರುಕಟ್ಟೆ ದರದಲ್ಲಿ ಹರಾಜು ಪ್ರಕ್ರಿಯೆ ಮೂಲಕ ಬಾಡಿಗೆ ನೀಡಿದರೆ ನಗರಸಭೆಗೆ ವಾರ್ಷಿಕ ಒಂದು ಕೋಟಿಗೂ ಹೆಚ್ಚು ಆದಾಯ ಬರಲಿದೆ. ಹೀಗಾಗಿ ಸದ್ಯದಲ್ಲೇ ಪ್ಲಾÈನ್-ಬಿ ಕಾರ್ಯಾಚರಣೆಗೆ ಅಣಿಯಾಗುತ್ತಿದೆ.

ಹೀಗಿದೆ ಸುಸ್ತಿದಾರರ ವಿವರ : ನಗರಸಭೆ ಮಳಿಗೆ ಸಂಖ್ಯೆ ೩, ೫, ೨೦, ೨೨ ಮತ್ತು ೨೩ರಲ್ಲಿ ಇಷ್ಟು ವರ್ಷ ಬಾಡಿಯಲ್ಲಿದ್ದ ನರಸಪ್ಪ ಬಾಗ್ಲಿ ೧,೫೩,೦೩೬ ರೂ., ಸೈಯದ್ ಅಲಿ ಮಕ್ದೂಮ್ ಸಾಬ್ ೩,೧೮,೨೪೧ ರೂ., Áರೂಕ್ ಅನ್ವರ್ ೧೮,೭೨೦ ರೂ., ಸಂಗಪ್ಪ ಪಂಚಪ್ಪ ಲಾಳಸಂಗಿ ೭೯,೫೬೦ ರೂ. ಹಾಗೂ ಹಣಮಂತರಾಯ ಯಂದೆ ೧,೦೫,೬೦೦ ರೂ. ಬಾಡಿಗೆ ಕಟ್ಟಬೇಕಾಗಿದೆ. ಆದರೆ ಸಕಾಲಕ್ಕೆ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ನಗರಸಭೆ ತನ್ನ ಮಳಿಗೆಗಳನ್ನು ಕೋರ್ಟ್ ಆದೇಶದಂತೆ ವಾಪಸ್ ಪಡೆದುಕೊಂಡಿದೆ.

ರಾಜಕೀಯ ಲೀಡರ್‌ಗಳ ಕೃಪಾಕಟಾಕ್ಷ : ಅಚ್ಚರಿ ಎಂದರೆ ನಗರಸಭೆಯಿಂದ ಅತ್ಯಂತ ಕಮ್ಮಿ ದರದಲ್ಲಿ ಬಾಡಿಗೆ ಪಡೆದ ಕೆಲವರು ಸಬ್ ಲೀಸ್ ಆಧಾರದ ಮೇಲೆ ಮತ್ತೊಬ್ಬರಿಗೆ ಸಾವಿರಾರು ರೂಪಾಯಿಗೆ ಬಾಡಿಗೆ ನೀಡಿದ್ದು ಬೆಳಕಿಗೆ ಬಂದಿದೆ. ತಿಂಗಳಿಗೆ ಇಷ್ಟು ಎಂದ ದರ ಫಿಕ್ಸ್ ಮಾಡಿ ಬಾಡಿಗೆ ಕೊಟ್ಟಿದ್ದಾರೆ. ಇನ್ನೂ ಹಲವು ಮಳಿಗೆಗಳು ಕೆಲ ರಾಜಕೀಯ ಪುಡಿ ಲೀಡರ್‌ಗಳ ಮಕ್ಕಳ ಹೆಸರಲ್ಲೂ ಇವೆ ಎಂದು ತಿಳಿದು ಬಂದಿದೆ. ಇಷ್ಟು ವರ್ಷ ಈ ಅಂದರ್-ಬಾಹರ್ ನಡೆಯುತ್ತ ಬಂದರೂ ಕೆಲ ರಾಜಕೀಯ ಲೀಡರ್‌ಗಳ ಕೃಪಾಕಟಾಕ್ಷದಿಂದ ಇವರ ತಂಟೆಗೆ ಯಾರೂ ಹೋಗಿರಲಿಲ್ಲ. ಆದರೆ ಉಪಾಸೆ ಪೌರಾಯುಕ್ತರಾಗಿ ಬಂದ ಬಳಿಕ ನಗರಸಭೆಯಲ್ಲಿನ ಒಂದೊAದೇ ಅಪಸವ್ಯಗಳನ್ನು ಬಯಲಿಗೆ ಎಳೆಯುತ್ತಿದ್ದಾರೆ.