ಯಾದಗಿರಿ: ನಗರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ಜಿಲ್ಲಾಡಳಿತದ ಹದ್ದಿನ ಕಣ್ಗಾವಲಿನಲ್ಲಿ ಸುಸೂತ್ರವಾಗಿ ನಡೆದವು.
ಬೆಳಗ್ಗೆ 9.30ಕ್ಕೆ ಜರುಗಿದ ಮೊದಲ ಅವೇಶನದಲ್ಲಿ 5373 ನೋಂದಾಯಿಸಿದ ಅಭ್ಯಥರ್ಿಗಳ ಪೈಕಿ 4766 ಹಾಜರಾಗಿ, 607 ಜನ ಹೈರಾಗಿದ್ದರು. 1.30ಕ್ಕೆ ಆರಂಭಗೊಂಡ ಎರಡನೇ ಅವೇಶನದಲ್ಲಿ 6489ರ ಪೈಕಿ 6087 ಹಾಜರಾಗಿ 402 ಅಭ್ಯಥರ್ಿಗಳು ಗೈರಾಗಿದ್ದರು. 26 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬಯಲಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತಿ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಭದ್ರತೆಯೊಂದಿಗೆ ಲೋಪವಿಲ್ಲದ ಹಾಗೆ ನಡೆಸುತ್ತಿದೆ. ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯಥರ್ಿಗಳಲ್ಲಿನ ಸ್ಮಾಟರ್್ ವಾಚ್, ಬೆಲ್ಟ್ ಮತ್ತು ಕಾಲಿನ ಬೂಟ್ಗಳನ್ನು ಸಹ ಕೇಂದ್ರದ ಮುಖ್ಯಸ್ಥರು ಒಳಗಡೆ ಬಿಡಲಿಲ್ಲ. ಕೇಂದ್ರದೊಳಗೆ ಕೇವಲ ಕರವಸ, ಪೆನ್ನು ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿತ್ತು.