ಜಿಲ್ಲೆ

ಸುವರ್ಣಾವತಿ ಜಲಾಶಯಕ್ಕೆ ಬಾಗಿನ ಸಮರ್ಪಣೆ

ಚಾಮರಾಜನಗರ: ನಿರಂತರ ಮಳೆಗೆ ಭರ್ತಿಯಾದ ತಾಲೂಕಿನ ಸುವರ್ಣಾವತಿ ಜಲಾಶಯಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಸೋಮವಾರ ಮಳೆಯ ನಡುವೆ ಬಾಗಿನ ಸಮರ್ಪಿಸಿದರು.

ಇದಕ್ಕೂ ಮೊದಲು ಸುವರ್ಣಾವತಿ ಜಲಾಶಯದ ಕೆಳಗಡೆವಿರುವ ಶ್ರೀಗಣೇಶ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು. ಬಳಿಕ ಜಲಾಶಯಕ್ಕೆ ಬಾಗಿನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಸುವರ್ಣಾವತಿ ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಬಾಗಿನ ಸಲ್ಲಿಸಲಾಗಿದೆ ಎಂದರು.

ನೀರಿಗೆ ಬರ ಅಗಲ್ಲ:

ವಿಶೇಷ ಎಂದರೆ ಈ ಭಾಗದಲ್ಲಿ ಎಂದಿಗೂ ನೀರಿನ ಸಮಸ್ಯೆ ಆಗುವುದಿಲ್ಲ. ಈ ಭಾಗದಲ್ಲಿ ಸುಮಾರು 20 ಕೆರೆಗಳು ಬರುತ್ತವೆ. ಪುಟ್ಟನಪುರಕೆರೆ, ಸರಗೂರುಮೋಳೆಕೆರೆ, ಕಾಗಲವಾಡಿ ಕೆರೆ, ಬಂಡಿಕೆರೆ, ಚಿಕ್ಕಮೋಳೆ, ದೊಡ್ಡಮೋಳೆ ಕೆರೆಗಳಿಗೆ ಕಬಿನಿಯಿಂದ ನೀರು ತುಂಬಿಸಲಾಗುತ್ತದೆ. ಅಲ್ಲದೆ ಈಗಾಗಲೇ ಎಲ್ಲ ಕೆರೆಗಳು ತುಂಬಿವೆ. ಇನ್ನೂ ಒಂದು ತಿಂಗಳಲ್ಲಿ ಮತ್ತೆ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಆಗಾಗಿ ಮೊದಲೆಲ್ಲ ಆರೆ ನೀರಾವರಿ ಪರಿಸ್ಥಿತಿವಿತ್ತು ಇನ್ನೂ ಮುಂದೆ ಬರಲ್ಲ. ಸುವರ್ಣಾವತಿ ಭರ್ತಿಯಾದರೆ ಸಿದ್ದಯ್ಯನಪುರ, ಹೊಂಗಲವಾಡಿ ಭಾಗಗಳಿಗೆ ಅನುಕೂಲವಾಗಲಿದೆ ಎಂದರು.

ಸುಮಾರು ವರ್ಷಗಳಿಂದ ನಾಲೆಗಳ ದುರಸ್ಥಿಯಾಗಿಲ್ಲ. ರಸ್ತೆಗಳು ದುರಸ್ಥಿಯಾಗಬೇಕಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಅವರು ನಾವಿಬ್ಬರು ಸೇರಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕಾಡಾ ರಸ್ತೆಗಳನ್ನು ಅಭವೃದ್ಧಿ ಪಡಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವು, ಗ್ರಾ.ಪಂ.ಅಧ್ಯಕ್ಷ ಶೇಖರಪ್ಪ, ಸುವರ್ಣಾವತಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಕಾವೇರಿರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ. ಜಯರಾಮ್ ಸಹಾಯಕ ఇంజినిಯರ್ ಕೆ.ಎಸ್.ಮಹೇಶ್‌, ಮುಖಂಡ ಗೋವಿಂದರಾಜು, ಕುಮಾರ್ ನಾಯಕ್ ಅಬ್ದಲ್‌ ಅಜೀಜ್ ದೀನಾ ಇತರರು ಹಾಜರಿದ್ದರು.