ಧಾರವಾಡ: ಕರೊನಾ ಸೋಂಕು ಕುರಿತು ಅಧಿಕೃತವಲ್ಲದ, ದಾರಿ ತಪ್ಪಿಸುವ ಕೆಲ ಸುಳ್ಳು ಸುದ್ದಿಗಳು ವಾಟ್ಸ್ಆಪ್, ಟ್ವಿಟರ್, ಟಿಕ್ಟಾಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂತಹ ಸುದ್ದಿಗಳನ್ನು ಹರಡಬಾರದು ಮತ್ತು ನಂಬಬಾರದು. ಈ ಕುರಿತು ಜನರು ಎಚ್ಚರ ವಹಿಸಬೇಕು. ಸುಳ್ಳು ಸುದ್ದಿಗಳು, ಅಧಿಕೃತವಲ್ಲದ ಸುದ್ದಿಗಳನ್ನು ಹಬ್ಬಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಧಿಕೃತವಲ್ಲದ ಯಾವುದೇ ಸಂದೇಶ, ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಹಂಚಿಕೊಳ್ಳುವ ಮುನ್ನ ಸರ್ಕಾರದ ಅಧಿಕೃತ ಮೂಲಗಳಲ್ಲಿ ಅಥವಾ ವೆಬ್ಸೈಟ್ಗಳನ್ನು ಪರಿಶೀಲಿಸಿ ಸರಿಯಾದ ಮಾಹಿತಿ ಪಡೆಯಬೇಕು. ವಿಷಯವು ಕೇಂದ್ರ ಸರ್ಕಾರದ ನೀತಿಗಳು ಅಥವಾ ಯೋಜನೆಗೆ ವಾಟ್ಸ್ಆಪ್ಸಂಖ್ಯೆ 91879971159 ಅಥವಾ ((ಟಜಿಚ್ಛಿಚ್ಚಠ್ಚಿಜಛ್ಚಿkಃಜಞಚಜ್ಝಿ.ಟಞ)) ವಿಳಾಸಕ್ಕೆ ವರದಿ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಅಥವಾ ಕೋಮು ದ್ವೇಷಕ್ಕೆ ಕಾರಣವಾಗುವ ಯಾವುದೇ ಸುಳ್ಳುಸುದ್ದಿ ಕಂಡುಬಂದಲ್ಲಿ ತಕ್ಷಣ ಪೋಲಿಸರಿಗೆ ತಿಳಿಸಿ ಅಥವಾ ((ಡಿಡಿಡಿ.ಢಚಿಛ್ಟಿcಜಿಞಛಿ.ಜಟಡ.ಜ್ಞಿ)) ನಲ್ಲಿ್ಲ ದೂರು ದಾಖಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಶ್ವ ವಿಪ್ರ ಸೇವಾ ಟ್ರಸ್ಟಿನಿಂದ ದಿನಸಿ ವಿತರಣೆ: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಹುಬ್ಬಳ್ಳಿ ಆನಂದನಗರದ ಶಿವಪುತ್ರನಗರ ಮುಖ್ಯ ರಸ್ತೆಯ ಸಂಗಮ ಕಾಲನಿಯಲ್ಲಿ ಬಡವರಿಗೆ ವಿಶ್ವ ವಿಪ್ರ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾರ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ಅಕ್ಕಿ, ತೊಗರಿ ಬೇಳೆ, ಸಕ್ಕರೆ ಮತ್ತು ಖಾದ್ಯ ತೈಲ ಒಳಗೊಂಡ ಸುಮಾರು 300 ಪ್ಯಾಕೆಟ್ಗಳನ್ನು ವಿತರಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಹ್ಯಾಂಡ್ಗ್ಲೌಸ್ ಮತ್ತು ಮಾಸ್ಕ್ ಧರಿಸಿದ್ದರು. ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ, ವಿಪ್ರ ಸಮಾಜದ ಮುಖಂಡ ಶ್ರೀಪಾದ ವೈದ್ಯ, ಟ್ರಸ್ಟ್ ಕಾರ್ಯದರ್ಶಿ ಸಂಜೀವಕುಮಾರ ಹುಲಗಿ, ಉಪಾಧ್ಯಕ್ಷ ಗಿರೀಶ ಜೋಶಿ, ಖಜಾಂಚಿ ಎಚ್. ಮುರುಳಿಧರ, ಪವನಕುಮಾರ ಮುತಾಲಿಕದೇಸಾಯಿ, ಸತೀಶ ಹುದ್ದಾರ, ಮಧು ಕಟ್ಟಿ, ಮನೋಜ ದೇಸಾಯಿ, ಮಾಲತೇಶ ಕುಲಕರ್ಣಿ, ಇತರರು ಇದ್ದರು.
25 ಸಾವಿರ ಮಾಸ್ಕ್ ವಿತರಣೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆಯಿಂದ ಧಾರವಾಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮತ್ತು ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ಉಚಿತವಾಗಿ ಸುಮಾರು 25 ಸಾವಿರ ಮಾಸ್ಕ್ಗಳನ್ನು ವಿತರಿಸಲಾಯಿತು. ಬಿಜೆಪಿ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ನೇತೃತ್ವದಲ್ಲಿ ಕುಂದಗೋಳ ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ, ಧಾರವಾಡ ಗ್ರಾಮಾಂತರ ತಾಲೂಕು ಅಧ್ಯಕ್ಷ ರುದ್ರಪ್ಪ ಅರಿವಾಳದ, ಧಾರವಾಡ ಗ್ರಾಮಾಂತರ ನಗರ ಘಟಕದ ಅಧ್ಯಕ್ಷ ಸುನೀಲ ಮೋರೆ, ಹುಬ್ಬಳ್ಳಿ ಗ್ರಾಮಾಂತರ ಅಧ್ಯಕ್ಷ ಯಲ್ಲಪ್ಪ ಮೇಟಿ ಇತರರು ಮಾಸ್ಕ್ ವಿತರಿಸಿದರು. ಜಿಲ್ಲೆಯ ಒಟ್ಟು 33 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ 176 ಗ್ರಾಮ ಪಂಚಾಯಿತಿಗಳಿಗೆ ಮಾಸ್ಕ್ ವಿತರಿಸಲಾಯಿತು.
ಶುಶ್ರೂಷಕರಿಗೆ ಮಾಸ್ಕ್ ವಿತರಣೆ: ಶುಶ್ರೂಷಕರು ಮತ್ತವರ ಕುಟುಂಬಗಳಿಗೆ ಪ್ರೋತ್ಸಾಹ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಘೊಷವಾಕ್ಯ ಮಾಡಿದ್ದರ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್ನ ಸುವರ್ಣ ಸಭಾಂಗಣದಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಎಲ್ಲ ಶುಶ್ರೂಷಕರಿಗೆ ವೈದ್ಯರು ಶುಭಾಷಯ ಹೇಳಿದರು. ಗುಲಾಬಿ ಬದಲು ಎಲ್ಲರಿಗೂ ಎನ್-95 ಮಾಸ್ಕ್ ವಿತರಿಸಿದರು. ಕೋವಿಡ್ ಪಾಸಿಟಿವ್ ವ್ಯಕ್ತಿ ಕಿಮ್ಸ್ನಲ್ಲಿ ದಾಖಲಾದಾಗ ಶ್ರಮಿಸಿದ ಶುಶ್ರೂಷಕರನ್ನು ಗುಣಗಾನ ಮಾಡಲಾಯಿತು. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಡಿಎಂಎಸ್ಗಳಾದ ಡಾ. ರಾಜಶೇಖರ ದ್ಯಾಬೇರಿ, ಡಾ. ಎಸ್.ವೈ. ಮುಲ್ಕಿಪಾಟೀಲ, ಮೆಡಿಷಿನ್ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಹಸಬಿ, ಪ್ರಾಧ್ಯಾಪಕ ಡಾ. ಡಿ.ಎಂ. ಕಬಾಡೆ, ಶುಶ್ರೂಷಾಧಿಕಾರಿ ಸಿ.ಬಿ. ದೊಡ್ಡಮನಿ, ಸುನೀತಾ ನಾಯ್ಕ, ಹನ್ನಪಾಲ್, ಸುರೇಖಾ ಮುನವಳ್ಳಿ, ಕಮಲಾ ಬಿ. ಇತರರು ಇದ್ದರು.
ನಿರಾಶ್ರಿತರಿಗೆ ಸಾಮಗ್ರಿ ವಿತರಣೆ: ದಿ.ವಿ.ಬಿ. ಡಂಗನವರ ಪ್ರತಿಷ್ಠಾನ ವತಿಯಿಂದ ಹುಬ್ಬಳ್ಳಿ ನಗರದ ಗೋಪನಕೊಪ್ಪ ಹಾಗೂ ಶಿರಡಿನಗರದ ಸರ್ಕಾರಿ ವಸತಿ ನಿಲಯದಲ್ಲಿನ ನಿರಾಶ್ರಿತರಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು. ವಾಕರಾರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಅವರು ನಿರಾಶ್ರಿತರಿಗೆ ಟಿಶರ್ಟ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಬಟ್ಟೆಗಳನ್ನು ವಿತರಿಸಿದರು. ರಾಜಣ್ಣ ಪವಾರ್, ಪ್ರಕಾಶ ಹುಡುಕೆರಿ, ಶಿವಕುಮಾರ್ ಕದಂ, ರಾಜು ಇನಾಮದಾರ, ಗೋವಿಂದ ಜೋಶಿ, ಪೂರ್ಣಿಮ ಕುಲಕರ್ಣಿ, ಮಲ್ಲಿಕ್ ಸಿಕಂದರ್, ನಾಗರಾಜ್ ಕಿತ್ತೂರು, ವೀರೇಶ ಡಂಗನವರ ಇತರರು ಇದ್ದರು.
ಮಾಹಿತಿ ಕೇಳಿದರೆ ಉಡಾಫೆ ಉತ್ತರ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಪರ ಊರುಗಳಿಂದ ಬಂದವರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ, ಧಾರವಾಡ ಸಾಯಿ ನಗರದಲ್ಲಿನ ಕುಟುಂಬವೊಂದು ಮಾಹಿತಿ ನೀಡಲು ನಿರಾಕರಿಸಿದ ಘಟನೆ ಮಂಗಳವಾರ ನಡೆದಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮನೆ ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಸಾಯಿ ನಗರದ ಮುಲ್ಲಾ ಎಂಬುವರ ಮನೆಗೆ ತೆರಳಿ ಮಾಹಿತಿ ಕೇಳಿದ್ದಾರೆ. ನಾವು ಮಾಹಿತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್, ಬೆಂಗಳೂರು ಸೇರಿ ಇತರ ಕಡೆಗಳಿಂದ ಜನ ಆಗಮಿಸಿದ್ದರೆ ಮಾಹಿತಿ ನೀಡಿ ಎಂದು ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸದೆ, ನಮ್ಮ ಮನೆಯಲ್ಲಿ 20 ಜನರಿದ್ದಾರೆಂದು ಬರಕೋರಿ. ನಮ್ಮ ಅಡ್ರೆಸ್ ಮುಲ್ಲಾ ಎಂದು ಬರಕೋರಿ... ಎಂದು ಉಡಾಫೆಯಾಗಿ ಮಾತನಾಡಿರುವುದಾಗಿ ತಿಳಿದುಬಂದಿದೆ. ಇದರಿಂದ ಬೇಸತ್ತ ಆಶಾಗಳು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಉಪನಗರ ಠಾಣೆ ಪೊಲೀಸರು ಕುಟುಂಬದ ಸದಸ್ಯರಿಗೆ ತಾಕೀತು ಮಾಡಿ ಮಾಹಿತಿ ನೀಡದಿದ್ದರೆ ಪರಿಸ್ಥಿತಿ ಬೇರೆ ಆಗುತ್ತದೆ ಎಂದು ಗದರಿಸಿದ್ದಾರೆ. ಅಂತೂ ಬಗ್ಗಿದ ಮುಲ್ಲಾ ಕುಟುಂಬದವರು ಒಲ್ಲದ ಮನಸ್ಸಿನಿಂದ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರಿಗೆ ಮಾಸ್ಕ್ ವಿತರಣೆ: ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಿಂಧೂರ ಲಕ್ಷ್ಮಣ ಹೋರಾಟ ಸಮಿತಿಯಿಂದ ಹುಬ್ಬಳ್ಳಿಯ ವಿದ್ಯಾನಗರ, ನವನಗರ ಹಾಗೂ ಗೋಕುಲ ರೋಡ್ ಪೋಲಿಸ್ ಠಾಣೆ ಸಿಬ್ಬಂದಿಗೆ ತಲಾ ಮೂವತ್ತು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು. ಸಮಿತಿ ಅಧ್ಯಕ್ಷ ರವೀಂದ್ರ ಬೆಂತೂರ, ನಾಗರಾಜ ನಾಯಕ, ಮಲ್ಲಿಕಾರ್ಜುನ ಬಿಜಾಪುರ, ರಾಘು ಹಿರೇಗೌಡರ, ಅವಿನಾಶ ದೊಡ್ಡಮನಿ, ರಾಜು ಬೆಂಗೇರಿ, ವಿದ್ಯಾಧರ ತೇರದಾಳ, ಮಹೇಶ ಬೆರಗುಡ್ ಇತರರು ಇದ್ದರು.
ಯುವ ಕಾಂಗ್ರೆಸ್ನಿಂದ ದಿನಸಿ ವಿತರಣೆ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ಹುಬ್ಬಳ್ಳಿ ಆನಂದನಗರ ಭಾಗದಲ್ಲಿ ಸುಮಾರು 1500 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ರಾಜ್ಯ ಸರ್ಕಾರ ಪಡಿತರ ಅಂಗಡಿಗಳ ಮೂಲಕ ಅಕ್ಕಿ ಮತ್ತು ಗೋಧಿ ನೀಡುತ್ತಿದ್ದು, ಉಳಿದ ಅಗತ್ಯ ವಸ್ತುಗಳಾದ ಸಕ್ಕರೆ, ರವಾ, ಬೇಳೆ, ಚಹಾಪುಡಿ, ಉಪ್ಪು, ಖಾದ್ಯತೈಲ ಒಳಗೊಂಡ ಪ್ಯಾಕೆಟ್ ಅನ್ನು ವಿತರಿಸಲಾಯಿತು. ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ ಯಲಿಗಾರ, ಮದನಿ ಟ್ರಸ್ಟ ಅಧ್ಯಕ್ಷ ಇಮ್ತಿಯಾಜ ಖಾಜಿ, ಮುದಸ್ಸರ ಖಾದ್ರಿ, ಮುನ್ನಾ ಸೌದಾಗರ, ಶರೀಫಸಾಬ ಬೆಂಗಳೂರ, ಯು.ಎಂ. ಸಿದ್ಧಿಕಿ, ಆರ್.ಎ. ಮುಲ್ಲಾ, ವಲಿ ಅಹ್ಮದ ಧಾರವಾಡ, ಇತರರು ಇದ್ದರು.
ಬೈಕ್ ಸವಾರರಿಗೆ ಪೊಲೀಸರ ಎಚ್ಚರಿಕೆ: ಹುಬ್ಬಳ್ಳಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಸಂಜೆ ಅನಗತ್ಯವಾಗಿ ಬೈಕ್ಗಳಲ್ಲಿ ತಿರುಗುತ್ತಿದ್ದವರನ್ನು ತಡೆದ ಪೊಲೀಸರು, ರಸ್ತೆಗೆ ಇಳಿಯದಂತೆ ಎಚ್ಚರಿಕೆ ನೀಡಿ ಬಿಟ್ಟರು. ದೇಶಪಾಂಡೆ ನಗರ, ಚೆನ್ನಮ್ಮ ವೃತ್ತ, ಸ್ಟೇಶನ್ ರಸ್ತೆ, ಸವೋದಯ ವೃತ್ತ, ಗೋಕುಲ ರಸ್ತೆ ಇತರೆಡೆಗಳಲ್ಲಿ ಅನಗತ್ಯವಾಗಿ ಬೈಕ್ಗಳಲ್ಲಿ ತಿರುಗುತ್ತಿದ್ದವರನ್ನು ಪೊಲೀಸರು ತಡೆದರು. ತುರ್ತು ಕೆಲಸ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಮಾಸ್ಕ್, ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಪೊಲೀಸರು ತಿಳಿವಳಿಕೆ ನೀಡಿದರು. ದೇಶಪಾಂಡೆ ನಗರದಲ್ಲಿ 10ಕ್ಕೂ ಹೆಚ್ಚು ಬೈಕ್ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು, ನಂತರ ಸವಾರರಿಗೆ ಎಚ್ಚರಿಕೆ ನೀಡಿ ಬಿಟ್ಟರು.
ರೈಲ್ವೆ ಮಜ್ದೂರ ಸಂಘದಿಂದ ಆಹಾರ ವಿತರಣೆ: ಹುಬ್ಬಳ್ಳಿ: ರೈಲ್ವೆಯ ದಿನಗೂಲಿ ಮತ್ತು ಗುತ್ತಿಗೆ ಕಾರ್ವಿುಕರಿಗೆ ನೈಋತ್ಯ ರೈಲ್ವೆ ಮಜ್ದೂರ ಸಂಘದಿಂದ ನಿತ್ಯ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಏ. 14ರವರೆಗೆ ನಿತ್ಯ 500 ಜನರಿಗೆ ಆಹಾರ ಮತ್ತು ನೀರಿನ ಬಾಟಲಿ ವಿತರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ. ಡಿಕ್ರೂಜ್ ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಸಾಗಾಟ ಕಾರ್ಯದಲ್ಲಿ ರೈಲ್ವೆಯ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೂ ಆಹಾರ ಸಾಮಗ್ರಿ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಸ್ವರ್ಣ ಗ್ರುಪ್ನಿಂದ ಆಹಾರ ಧಾನ್ಯ ವಿತರಣೆ: ಲಾಕ್ಡೌನ್ನಿಂದ ತೊಂದರೆಗೀಡಾದ ಅವಳಿ ನಗರದ ಜನರಿಗೆ ಸ್ವರ್ಣ ಗ್ರುಪ್ ವತಿಯಿಂದ ಚಿಗುರುಪಾಟಿ ವಿ.ಎಸ್.ವಿ. ಪ್ರಸಾದ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಮಂಗಳವಾರ ಹುಬ್ಬಳ್ಳಿ ನಗರದ ಗದಗ ರಸ್ತೆಯ ಸೆಂಟ್ ಪೀಟರ್ ಚರ್ಚ್ಗೆ ಭೇಟಿ ನೀಡಿದ ಅವರು, ನಿರಾಶ್ರಿತರಿಗೆ ಹಾಗೂ ಬಡವರಿಗೆ ಆಹಾರ ಧಾನ್ಯ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿ.ಎಸ್.ವಿ. ಪ್ರಸಾದ, ಈಗಾಗಲೇ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ್ದು, ಇನ್ನೂ 5 ಲಕ್ಷ ರೂ. ನೀಡುವುದಾಗಿ ತಿಳಿಸಿದರು. ಕರೊನಾ ಸೋಂಕು ನಿಯಂತ್ರಿಸಲು ನಾಗರಿಕರು ಮನೆಯಲ್ಲಿಯೇ ಇರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.