ಸವರ್ಣಿಯ ಸಮುದಾಯದವರಿಗೆ ಬೇಡ ಜಂಗಮ ಎಂದು ಎಸ್ಸಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಚಿಕ್ಕೋಡಿ ಎಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶೇಖರ ಪ್ರಭಾತ, ರಾವಸಾಹೇಬ ಕೀರೆ, ತ್ಯಾಗರಾಜ ಕದಂ, ರಾವಸಾಹೇಬ ದೇವರಮನಿ ಇತರರಿದ್ದರು. 
ಜಿಲ್ಲೆ

ಸುಳ್ಳು ಜಾತಿ ಪ್ರಮಾಣಪತ್ರ ಹಾವಳಿ ತಡೆಗೆ ಆಗ್ರಹ

ಚಿಕ್ಕೋಡಿ: ಸವರ್ಣಿಯ ಸಮುದಾಯದವರಿಗೆ ಬೇಡ ಜಂಗಮ ಎಂದು ಎಸ್ಸಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಎಸ್ಸಿ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.

ಪಟ್ಟಣದ ಹರಳಯ್ಯ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ಸುಳ್ಳು ಜಾತಿ ಪ್ರಮಾಣ ಹಾವಳಿ ತಡೆಗಟ್ಟಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಶೇಖರ ಪ್ರಭಾತ, ರಾವಸಾಹೇಬ ಕೀರೆ, ತ್ಯಾಗರಾಜ ಕದಂ, ರಾವಸಾಹೇಬ ದೇವರಮನಿ, ಸಂತೋಷ ಭೀಮಪುತ್ರ, ರಮೇಶ ಮಾದರ ಮಾತನಾಡಿ, ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಸಹಕರಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂಧಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸುದರ್ಶನ ತಮ್ಮಣ್ಣವರ, ಅಶೋಕ ಭಂಡಾರಕರ, ಅಪ್ಪಾಸಾಹೇಬ ಬ್ಯಾಳಿ, ಸುರೇಶ ಬ್ಯಾಕುಡೆ, ಸಂಜಯ ಕಾಂಬಳೆ, ಅರ್ಜುನ ಮಾನೆ, ನಂದಕುಮಾರ ದರಬಾರೆ, ಎಂ.ಆರ್.ಮುನ್ನೋಳಿಕರ, ರಾಘವೇಂದ್ರ ಸನದಿ ಇತರರು ಇದ್ದರು.