ಜಿಲ್ಲೆ

ಸುಳ್ಯ ಮೂರೂರು ಭಾಗದಲ್ಲಿ ಕಾಡಾನೆ ದಾಳಿಗೆ ಕೃಷಿ ನಾಶ

ಮಂಗಳೂರು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ, ಮುರೂರು ಭಾಗದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಕೃಷಿಗೆ ಹಾನಿ ಮಾಡಿದೆ.

ನಾಲ್ಕು ಕಾಡಾನೆಗಳ ಹಿಂಡು ದಾಳಿ ನಡೆಸಿ ಅಡಕೆ, ತೆಂಗು, ಬಾಳೆ ಗಿಡಗಳನ್ನು ಹಾನಿ ಉಂಟು ಮಾಡಿದೆ. ಕಳೆದ ವಾರದಲ್ಲೂ ಕಾಡಾನೆ ಹಿಂಡು ದಾಳಿ ಮಾಡಿತ್ತು.