ಚಿತ್ರದುರ್ಗ: ಮುರುಘಾಮಠದಲ್ಲಿ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ನಡೆದ ಜಯದೇವ ರಾಷ್ಟ್ರೀಯ ಜಂಗೀ ಕುಸ್ತಿಯಲ್ಲಿ ಮಧ್ಯಪ್ರದೇಶದ ಸುರೇಶ್ ರಾಥೋಡ್ ಚಿನ್ಮೂಲಾದ್ರಿ ಕೇಸರಿ, ಬೆಳಗಾವಿಯ ಲಕ್ಷ್ಮೀ ಕೇಸರಿ ಒನಕೆ ಓಬವ್ವ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪ್ರಥಮ ಬಹುಮಾನದೊಂದಿಗೆ ಇಬ್ಬರೂ ಕ್ರಮವಾಗಿ 30 ಸಾವಿರ ರೂ, 15 ಸಾವಿರ ರೂ., ಅದೇ ರೀತಿ ಮಹಾರಾಷ್ಟ್ರದ ಪಾಲು ಅಮಾದ್, ಬೆಳಗಾವಿಯ ರಾಣಿ ತಲಾ ರೂ. 10 ಸಾವಿರ ರೂ.ನೊಂದಿಗೆ ದ್ವಿತೀಯ ಬಹುಮಾನ ಪಡೆದುಕೊಂಡರು.
ತೀರ್ಪುಗಾರರಾದ ಪೈಲ್ವಾನ್ ತಿಪ್ಪೇಸ್ವಾಮಿ, ಮಹೇಂದ್ರನಾಥ್, ಮರಡಿ ಪೈಲ್ವಾನ್ ತಿಪ್ಪೇಸ್ವಾಮಿ, ಆಫೀಜ್, ಮೂರ್ತಣ್ಣ, ಮೈಸೂರಿನ ಪೈಲ್ವಾನ್ ಅಮೃತ್ ಇತರರಿದ್ದರು.