ಜಿಲ್ಲೆ

ಸುರೇಶ್ ನಾಗ್ ಅವರಿಗೆ ಗಾನ ಗಾರುಡಿಗ ಪ್ರಶಸ್ತಿ

ಚಾಮರಾಜನಗರ: ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡಲ್ಪಡುವ ರಾಷ್ಟ್ರಮಟ್ಟದ ಗಾನ ಗಾರುಡಿಗ ಪ್ರಶಸ್ತಿಗೆ ತಾಲೂಕಿನ ಹರದನಹಳ್ಳಿ ಜ.ಸುರೇಶ್‌ನಾಗ್ ಭಾಜನರಾಗಿದ್ದಾರೆ.

ರಾಯಚೂರಿನ ರಂಗಮಂದಿರದಲ್ಲಿ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜ.18 ರಂದು ನಡೆಯುವ ರಾಷ್ಟ್ರಮಟ್ಟದ ಕನ್ನಡ ಕಲರವ ಸಮ್ಮೇಳನದಲ್ಲಿ ಸುರೇಶ್‌ನಾಗ್ ಅವರಿಗೆ ರಾಷ್ಟ್ರಮಟ್ಟದ ಗಾನಗಾರುಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅವರು ಜಾನಪದ ಗಾಯನ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಆಧ್ಯಕ್ಷ ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.