ಜಿಲ್ಲೆ

ಸುರೇಶ್ ಎನ್.ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ

ಚಾಮರಾಜನಗರ: ಸಂಸ್ಕಾರ ಸಂಸ್ಕೃತಿ ಸಂಘಟನೆ ಪ್ರತಿವರ್ಷ ಕೊಡಮಾಡುವ ವಿಪ್ರ ವಿಕಾಸ ಪ್ರಶಸ್ತಿಗೆ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಆಯ್ಕೆಯಾಗಿದ್ದಾರೆ. ಬೇಲೂರಿನ ಶ್ರೀಶೃಂಗೇರಿ ಶಾರದಾ ಪೀಠದ ಶ್ರೀಭಾರತಿ ತೀರ್ಥ ಸಭಾ ಭವನದಲ್ಲಿ ಜು.20 ರಂದು ನಡೆಯಲಿರುವ ಬೇಲೂರು ಹಬ್ಬ-2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಮಾನ ಮನಸ್ಕರ ಮಾಧ್ಯಮ ಮಿತ್ರರ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿ ಹನುಮೇಶ್ ಕೆ.ಯಾವಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.