ಜಿಲ್ಲೆ

ಸುರಕ್ಷಾ ಕಿಟ್‌ಗಳನ್ನು ಧರಿಸಿ

ಚಿತ್ರದುರ್ಗಸುರಕ್ಷಾ ಕಿಟ್‌ಗಳನ್ನು ಧರಿಸಿಸುರಕ್ಷಾ ಕಿಟ್‌ಗಳನ್ನು ಧರಿಸಿಕೊಳ್ಳ ಬೇಕು ಹಾಗೂ ಮೊಬೈಲ್‌ನಲ್ಲಿ ಮಾತನಾಡುವುದನ್ನು ಕಡಿಮೆ ಮಾಡ  ಬೇಕೆೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ ಕಾ ರ್ಮಿಕರಿಗೆ ಸಲಹೆ ನೀಡಿದರು. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 16ನೇ ವರ್ಷದ ಕಾರ್ಮಿಕರ ದಿನಾಚರಣೆ ಹಾಗೂ ನೊಂದಾಯಿತ ಕಟ್ಟಡ ಕಾರ್ಮಿಕರ ಪ್ರತಿಭಾವಂತ ಮಕ್ಕಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ,ಕಟ್ಟಡ ಕಾರ್ಮಿಕರು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರ‌್ನು ನಮೂದಿಸಬೇಕು.ಮಕ್ಕಳ ವಿದ್ಯಾರ್ಥಿವೇತನ, ವಿವಾಹ ಧನ ಸಹಾಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಕಾಲ,ಕಾಲಕ್ಕೆ ತಕ್ಕಂತೆ ಗುರುತಿನ ಚೀಟಿ ನವೀಕರಣವಾಗಬೇಕು. ನಿಜವಾದ ಕಾ ರ್ಮಿಕರು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು. ವಿವಾಹವಾಗಿ ಒಂದು ತಿಂಗಳ ನಂತರ ಸಹಾಯ ಧನಕ್ಕೆ ಅರ್ಜಿಗಳನ್ನು ಸಲ್ಲಿಸಿದರೆ ಒಳ್ಳೆಯದು ಎಂದರು.

ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕಾರ್ಮಿಕರು ಚಿಕಿತ್ಸೆ ಪಡೆದರೆ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯ. 60 ವರ್ಷಗಳ ನಂತರ ಕಟ್ಟಡ ಕಾರ್ಮಿಕರು ಪಿಂಚಣಿಗೆ ಅರ್ಹರಾಗುತ್ತಾರೆ. 55 ವರ್ಷಗಳ ನಂತರ ಗುರುತಿನ ಚೀಟಿ ನವೀಕರಿಸಿಕೊಳ್ಳ ಬೇಕೆಂದರು. ಕೆಲಸದಲ್ಲಿ ನೈಪುಣ್ಯತೆ ಕಂಡುಕೊಳ್ಳ ಬೇಕು. ದುಶ್ಚಟಗಳಿಂದ ದೂರವಿದ್ದು,ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ,ದುಶ್ಚಟಗಳಿಂದ ದೂರವಿದ್ದು,ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿ. ಆಗ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ ಎಂದರು. ರಾಜ್ಯಕಬ್ಬು ಬೆಳೆಗಾರರ ಸಂಘದ ಕಾರ‌್ಯಾಧ್ಯಕ್ಷ ತೇಜಸ್ವಿಪಟೇಲ್,ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎಂ.ಮಲ್ಲಿಕಾರ್ಜುನ್,ಪಿ.ಲಕ್ಷ್ಮೀದೇವಿ,ಟಿ.ಅಶೋಕ,ಶಿವಮೂರ್ತಿ,ಎಚ್.ಹಾಲೇಶಪ್ಪ ಇತರರು ಇದ್ದರು.ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಕಾರ್ಮಿಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.