ಬಸವಕಲ್ಯಾಣದಲ್ಲಿ ಮಂಗಳವಾರ ಆಯೋಜಿಸಿದ್ದ ೩೬ನೇ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭವನ್ನು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ ಉದ್ಘಾಟಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ, ಪ್ರಧಾನ ಮತ್ತು ಎಎಂಎಫ್‌ಸಿ ನ್ಯಾಯಾಧೀಶ ಜ್ಞಾನೇಶ್ವರ ವಿಠ್ಠಲ ಮಾಳಗಿ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ಸಿಪಿಐ ಅಲಿಸಾಬ್, ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ್, ಆರ್‌ಟಿಒ ಜಿ,ಕೆ ಬಿರಾದಾರ, ಪರಮಾನಂದ ಸಜ್ಜನ್, ಎಪಿಪಿ ಜಗದೇವಿ ಚೊಂಡೆ ಇದ್ದರು. 
ಜಿಲ್ಲೆ

ಸುರಕ್ಷತೆಗಾಗಿ ರಸ್ತೆ ನಿಮಯ ಪಾಲಿಸಿ

ಬಸವಕಲ್ಯಾಣ: ಅಮೂಲ್ಯವಾಗಿರುವ ಜೀವ, ಜೀವನದ ಸುರಕ್ಷತೆಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಸಹ ಪಾಲಿಸುವುದು ಅವಶ್ಯಕ ಎಂದು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬಸವಕಲ್ಯಾಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಂದವರ ಓಣಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ೩೬ನೇ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ೧೮ ವರ್ಷ ಒಳಗಿನ ಮಕ್ಕಳ ಕೈಗೆ ಬೈಕ್ ಕೊಡಬಾರದು. ಕೊಟ್ಟರೆ ಪಾಲಕರ ಮೇಲೆ ಕೇಸ್ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.

ಬೈಕ್ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯ ಧರಿಸಬೇಕು. ಮೊಬೈಲ್ ಬಳಸಬಾರದು. ಒಂದು ಯಡವಟ್ಟಿನಿಂದ ಜೀವನ ಸಂಕಷ್ಟಕ್ಕೆ ಸಿಲುಕಿ ಜೀವವೂ ಹೋಗಬಹುದು. ನಿಮ್ಮ ಒಳತಿಗಾಗಿ, ಭವಿಷ್ಯದ ದೃಷ್ಟಿಯಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ್ ಮಾತನಾಡಿ, ಅಪಘಾತ ತಗ್ಗಿಸಬೇಕು. ಅಪಘಾತ ರಹಿತ ಸಂಚಾರಿ ವ್ಯವಸ್ಥೆಗಾಗಿ ಜನರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸುವುದೇ ಮಾಸಾಚರಣೆ ಉದ್ದೇಶವಾಗಿದೆ. ಸಾರ್ವಜನಿಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಸಿಪಿಐ ಅಲಿಸಾಬ್ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ, ಪ್ರಧಾನ ಮತ್ತು ಎಎಂಎಫ್‌ಸಿ ನ್ಯಾಯಾಧೀಶ ಜ್ಞಾನೇಶ್ವರ ವಿಠ್ಠಲ ಮಾಳಗಿ, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ಪೌರಾಯುಕ್ತ ರಾಜು ಬಣಕಾರ, ಎಪಿಪಿಗಳಾದ ಅರವಿಂದ, ಜಗದೇವಿ ಚೊಂಡೆ, ಬಾಲಾಜಿ ಅದೆಪ್ಪ, ಹಿರಿಯ ಮೋಟಾರ ವಾಹನ ನಿರೀಕ್ಷಕ ಪರಮಾನಂದ ಸಜ್ಜನ, ರಾಜಕುಮಾರ ಚಪ್ಟೆ, ಕಚೇರಿ ಅಧೀಕ್ಷಿಕ ರಾಧಿಕಾ, ಇಂಜಿನಿಯರಿಂಗ್ ಕಾಲೇಜು ರಜಿಸ್ಟರ್ ಪ್ರೇಮಸಾಗರ ಪಾಟೀಲ್, ಚಾಲನಾ ತರಬೇತಿ ಶಾಲೆ ಪ್ರಾಚಾರ್ಯ ರಾಜು ಭೋಸಲೆ, ಧನರಾಜ ಪಾಟೀಲ್, ಶರೀಫ್ ಪಟೇಲ್, ರಾಕೇಶ ಚಿಂಚೋಳೆ, ಅನುಪಕುಮಾರ, ಕಚೇರಿ ಸಿಬ್ಬಂದಿ ಸಂಗಮೇಶ, ಏಜಾಜ್, ಶ್ರೀನಿವಾಸ, ಅಜಿತ್, ಬಸವರಾಜ ಮೆಣಸಗಿ ಇತರರಿದ್ದರು. ಆರ್‌ಟಿಒ ಜಿ.ಕೆ.ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಜಡಗೆ ನಿರೂಪಣೆ ಮಾಡಿದರು.

ಮೊಬೈಲ್‌ನಿಂದ ದೂರವಿದ್ದು ಅಭ್ಯಾಸದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ತನ್ನನ್ನು ನೋಡುವರನ್ನು ತಲೆ ಎತ್ತದಂತೆ ಮಾಡುತ್ತೇನೆ ಎಂದು ಮೊಬೈಲ್ ಹೇಳುತ್ತದೆ. ತಲೆ ತಗ್ಗಿಸಿ ತನ್ನನ್ನು ಓದುವರನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ ಎಂದು ಪುಸ್ತಕ ಹೇಳುತ್ತದೆಯಂತೆ. ಆಯ್ಕೆ ನಿಮ್ಮ ಕೈಯಲ್ಲಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಶ್ರಮ ವಹಿಸಿ ಪುಸ್ತಕ ಓದುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜತೆಗೆ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸುವ ಕನಸು ಕಾಣಬೇಕು.

| ರಾಘವೇಂದ್ರ ಎಸ್.ಚನ್ನಬಸಪ್ಪನವರು

೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ವಾಹನ ಚಲಾಯಿಸುವಾಗ ಸಣ್ಣ ನಿರ್ಲಕ್ಷ್ಯವೂ ಅಪಘಾತಕ್ಕೆ ಕಾರಣವಾಗುತ್ತದೆ. ಅಲ್ಲದೇ ತಮ್ಮ ಜತೆಗೆ ಎದುರಿನವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಮನೆಯಲ್ಲಿ ತಮಗಾಗಿ ದಾರಿ ನೋಡುವರು ಇದ್ದಾರೆ. ಸಂಚಾರಿ ನಿಮಯಮ ಪಾಲಿಸಿ ಸುರಕ್ಷಿತವಾಗಿ ಮನೆಗೆ ಹೋಗಬೇಕು ಎನ್ನುವ ಪರಿಜ್ಞಾನ ಎಲ್ಲರಲ್ಲಿಯೂ ಅವಶ್ಯಕ.

| ಡಾ.ದತ್ತಾತ್ರೇಯ ಗಾದಾ ತಹಸೀಲ್ದಾರ್

ಶಿಕ್ಷಣ ಪೂರ್ಣಗೊಳಿಸಲು, ಜೀವನದ ಗುರಿ ತಲುಪಲು, ಭವಿಷ್ಯದಲ್ಲಿ ಕನಸುಗಳನ್ನು ಸಾಕಾರಗೊಳಿಸಲು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದಾಗಿ ಇಂದು ಮಾಡಿರುವ ಪ್ರತಿಜ್ಞೆ ಜೀವನದಲ್ಲಿ ಪಾಲಿಸುವುದು ಮುಖ್ಯ. ೧೮ ವರ್ಷದ ಒಳಗಿನ ಮಕ್ಕಳ ಕೈಗೆ ಬೈಕ್ ಕೊಟ್ಟರೆ ಪಾಲಕರ ಮೇಲೆ ಕೇಸ್ ಹಾಕಲಾಗುವದು.

| ಅಲಿಸಾಬ್ ಸಿಪಿಐ