ನರಗುಂದ: ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಸುರಕೋಡ ಗ್ರಾಪಂ ಆಯ್ಕೆಯಾಗುವ ಮೂಲಕ ಸತತ 2ನೇ ಬಾರಿಗೆ ಈ ಪ್ರಶಸ್ತಿಗೆ ಭಾಜನವಾಗಿದೆ. ಬೆಂಗಳೂರಲ್ಲಿ ಅ. 2ರಂದು ನಡೆಯುವ ಸಮಾರಂಭದಲ್ಲಿ ಪಿಡಿಒ ಶಿವಾನಂದ ಉಪ್ಪಾರ, ಆಡಳಿತಾಧಿಕಾರಿ ಸಂಜೀವ ಚವ್ಹಾಣ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ 5 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸ್ವಚ್ಛ ಭಾರತ ಯೋಜನೆಯಡಿ ಗ್ರಾಮದಲ್ಲಿ 450 ವೈಯಕ್ತಿಕ ಶೌಚಗೃಹಗಳನ್ನು ನಿರ್ವಿುಸಲಾಗಿದೆ. 2018-19ರಲ್ಲಿ ಗ್ರಾಮ ವಿಕಾಸ ಯೋಜನೆಯ 10 ಲಕ್ಷ ರೂ.ಗಳಲ್ಲಿ ಗ್ರಂಥಾಲಯ, 10 ಲಕ್ಷ ರೂ.ಗಳಲ್ಲಿ ನೂತನ ಜಿಮ್ ಕಟ್ಟಡ, ಎಸ್ಸಿ/ಎಸ್ಟಿ ಪ್ರದೇಶಗಳಲ್ಲಿ 75 ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆ ನಿರ್ವಣ, 3 ಲಕ್ಷ ರೂ.ಗಳಲ್ಲಿ ಹೈಮಾಸ್ಟ್ ಮತ್ತು ಎಲ್ಇಡಿ ವಿದ್ಯುದ್ದೀಪಗಳ ಅಳವಡಿಕೆ, ತಿಪ್ಪೆ ಸಂಸ್ಕರಣೆ ಯೋಜನೆಯಡಿ 120 ತಿಪ್ಪೆ ಸಂಸ್ಕರಣ ಮಾಡಲಾಗಿದೆ.
ನವ ಗ್ರಾಮದಲ್ಲಿ ಎನ್ಆರ್ಇಜಿ ಯೋಜನೆಯ 16.20 ಲಕ್ಷ ರೂ.ಗಳಲ್ಲಿ ಗ್ರಾಪಂ ನೂತನ ಕಟ್ಟಡ ನಿರ್ವಣ, 12.5 ಲಕ್ಷ ರೂ.ಗಳಲ್ಲಿ ಮಹಿಳಾ ಸ್ವಸಹಾಯ ಗುಂಪು ಗಳಿಗೆ ವರ್ಕ್ಶೆಡ್ ನಿರ್ವಣ, 10 ಲಕ್ಷ ರೂ.ಗಳಲ್ಲಿ ಅಂಗನವಾಡಿ ಕಟ್ಟಡ, 1.50 ಲಕ್ಷ ರೂ.ಗಳಲ್ಲಿ ನೂತನ ಗ್ರಾಪಂ ಆವರಣ ಹಾಗೂ ಸರ್ಕಾರಿ ಪ್ರೌಢ ಶಾಲೆಯಲ್ಲಿ 2 ಲಕ್ಷ ರೂ.ಗಳಲ್ಲಿ ಉದ್ಯಾನ ನಿರ್ವಿುಸಲಾಗಿದೆ. 4 ಲಕ್ಷ ರೂ.ಗಳಲ್ಲಿ ಶಾಲೆ ಕಾಂಪೌಂಡ್ ನಿರ್ವಣ, ಬಾಲ್ಯ ವಿವಾಹ ತಡೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಸುರಕೋಡ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಒಲಿದಿದೆ.
ಪಿಡಿಒ ಆಗಿ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಗ್ರಾಮಸ್ಥರು, ಗ್ರಾಪಂ ಸದಸ್ಯರು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿದ್ದಾರೆ. ಗ್ರಾಮ ವಿಕಾಸ ಯೋಜನೆಯಡಿ ವಿವಿಧ ಕಾಮಗಾರಿ ಮಾಡಿದ್ದರಿಂದ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. 2019-20ರಲ್ಲಿ 14ನೇ ಹಣಕಾಸು ಯೋಜನೆ ಯಡಿ ಗ್ರಾಪಂಗೆ ಬಿಡು ಗಡೆಯಾದ 25 ಲಕ್ಷ ರೂ.ಗಳಲ್ಲಿ ಗ್ರಾಮ ಅಭಿವೃದ್ಧಿ ಪಡಿಸಲಾಗಿದೆ.| ಶಿವಾನಂದ ಉಪ್ಪಾರ ಸುರಕೋಡ ಗ್ರಾಪಂ