ಕೊಡಗರಹಳ್ಳಿಯ ನೇತಾಜಿ ಯುವಕ ಸಂಘದಿಂದ ನೇತಾಜಿ ಸುಭಾಶ್ ಚಂದ್ರಬೋಸ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು. 
ಜಿಲ್ಲೆ

ಸುಭಾಷ್‌ಚಂದ್ರ ಬೋಸ್ ಹೋರಾಟ ಅನನ್ಯ

ಸುಂಟಿಕೊಪ್ಪ: ಸುಂಟಿಕೊಪ್ಪ-ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ ವತಿಯಿಂದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನವನ್ನು ಸೋಮವಾರ ಆಚರಿಸಲಾಯಿತು.

ಸಂಘದ ನೇತಾಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಂಡುವಂಡ ಪುನಿತ್ ಪೂಣ್ಣಚ್ಚ ಅವರ ನೇತೃತ್ವದಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ದಿನೇಶ್ ಮಾತನಾಡಿ, ಸ್ವಾತಂತ್ರೃ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಹೋರಾಟ ಅನನ್ಯವಾದದು. ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟುವ ಮೂಲಕ ಸ್ವಾತಂತ್ರೃವನ್ನು ಸಾಧಿಸಬಹುದೆಂದು ನಂಬಿದ್ದರು. ಅವರ ವ್ಯಕ್ತಿತ್ವ ಮತ್ತು ಬದುಕು ಅತ್ಯಂತ ಸಂಘರ್ಷಮಾಯವಾಗಿದ್ದು, ಅವರ ಸಾವು ಇಂದಿಗೂ ತಾರ್ಕಿಕ ಅಂತ್ಯಕ್ಕೆ ಬರಲಾಗದಿರುವುದು ಇದಕ್ಕೆ ಸಾಕ್ಷಿ ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಂಗವಾಗಿ ಬೈತೂರಪ್ಪ ದೇವಾಲಯದ ಮುಖ್ಯ ಆರ್ಚಕಭಾನುಪ್ರಕಾಶ್ ಭಟ್ ಮತ್ತು ರಘುಪತಿಭಟ್ ಗಣಹೋಮ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಕೆ.ವಿ.ಸುನಿಲ್ ಕುಮಾರ್, ಖಜಾಂಜಿ ಮಿಲನ್ ರಾಮಣ್ಣ, ಸಂಘದ ಮಾಜಿ ಅಧ್ಯಕ್ಷ ಡಾ.ಶಶಿಕಾಂತ ರೈ, ಹಿರಿಯರಾದ ಕೆ.ಎಸ್.ಮಂಜುನಾಥ್, ಎಂ.ಎಸ್.ಸುರೇಶ್ ಚಂಗಪ್ಪ, ಪಿ.ಕೆ.ಜಗದೀಶ್ ಇತರರಿದ್ದರು.