ಜಿಲ್ಲೆ

ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಾಧುನವರ ಎಸ್ಟೇಟ್‌ನ ಸಾಯಿ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭ ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು.
ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ವೀರಭದ್ರಯ್ಯ ಹಿರೇಮಠ ಅವರಿಂದ ಗಣಹೋಮ, ರುದ್ರ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ನಾಗದೇವರ ಹೋಮ ಸೇರಿ ವಿವಿಧ ಹೋಮ-ಹವನಗಳನ್ನು ನೆರವೇರಿಸಲಾಯಿತು.
ಕಮತಗಿಯ ಶ್ರೀ ಹುಚ್ಚೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿ ವರ್ಷ ಪ್ರವಚನ, ಅನ್ನ ದಾಸೋಹ ಮಾಡಿದರೆ ಈ ಕ್ಷೇತ್ರ ಪುಣ್ಯ ಕ್ಷೇತ್ರವಾಗಲಿದೆ. ದೂರದ ಸುಬ್ರಹ್ಮಣ್ಯಕ್ಕೆ ಹೋಗಿ ಸೇವೆ ಸಲ್ಲಿಸುವುದಕ್ಕಿಂತ ಈ ದೇವಸ್ಥಾನ ಉತ್ತರ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯವಾಗಿ ಭಕ್ತರ ಇಷ್ಟಾರ್ಥ ಕರುಣಿಸುವಂತಾಗಲಿ ಎಂದು ಹಾರೈಸಿದರು.
ಕಟಕೋಳದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಮುನವಳ್ಳಿಯ ಶ್ರೀ ಮುರುೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಸಂಘದ ಅಧ್ಯಕ್ಷೆ ಸಂಗಮೇಶ್ವರಿ ಮಠದ, ಗುರುರಾಜ ತುರಮರಿ, ಶಿವಕುಮಾರ ಮಠದ, ಗುರುನಾಥ ಮುತ್ತಗಿ, ಅನ್ನದಾನಿ ಚೌಕಿಮಠ, ಸ್ವಪ್ನಿಲ್ ಸಾಬಳೆ, ಪಾರ್ವತಿ ಚೌಕಿಮಠ, ಸಾಧನಾ ತುರಮರಿ, ನೀತಾ ಹಿರೇಮಠ, ಸಂಗೀತಾ ಸುತಾರ, ಮಹಾದೇವಿ ಮುತ್ತಗಿ, ಜಯಲಕ್ಷ್ಮೀ ಧೋತ್ರದ, ನಿರ್ಮಲಾ ಸವದತ್ತಿ, ಯಶೋಧಾ ಪಾಟೀಲ, ನಿಜನಗೌಡ ಪಾಟೀಲ, ಜಿ.ಡಿ. ಹಿರೇಮಠ, ಬಸವರಾಜ ಬೆಂಡಿಗೇರಿ, ಆನಂದ ಮೂಲಿಮನಿ, ರುದ್ರಯ್ಯ ಮಠದ, ಶಿರಡಿನಗರ, ಬಸವಾ ಕಾಲನಿ, ಹಿರೇಮಠ ಲೇಔಟ್, ಸುತ್ತಲಿನ ಪ್ರದೇಶಗಳ ನಿವಾಸಿಗಳು ಪಾಲ್ಗೊಂಡಿದ್ದರು. ವೀರನಗೌಡ ಪಾಟೀಲ ನಿರೂಪಿಸಿದರು.