ಕಲಬುರಗಿ: ಕಲಾವಿದ ಮತ್ತು ಶರಣಬಸವ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಚೇರಪರ್ಸನ್ ಪ್ರೊ. ಸುಬ್ಬಯ್ಯ ನೀಲಾ ಅವರು ಫೆ.೨೦ರಂದು ಹೈದರಾಬಾದ್‌ನಲ್ಲಿ ಹೈದರಾಬಾದ್ ಆರ್ಟ್ ಸೊಸೈಟಿ ಆಯೋಜಿಸಿದ್ದ ೮೪ ನೇ ಅಖಿಲ ಭಾರತ ವಾರ್ಷಿಕ ಕಲಾ ಪ್ರದರ್ಶನ ೨೦೨೫ ರಲ್ಲಿ ಪ್ರತಿಷ್ಠಿತ ಶ್ರೀಮತಿ ಎಂ ಹರಿತಾ ಸ್ಮಾರಕ ರಾಷ್ಟಿçÃಯ ಪ್ರಶಸ್ತಿ ಪಡೆದಿದ್ದಾರೆ. ಪ್ರೊ.ನೀಲಾ ಅವರ ಫೆಸ್ಟಿವಲ್ ಎಂಬ ವರ್ಣಚಿತ್ರವನ್ನು ವಾರ್ಷಿಕ ಕಲಾ ಪ್ರದರ್ಶನದಲ್ಲಿ ಅತ್ಯುತ್ತಮ ಚಿತ್ರಕಲೆ ಎಂದು ಆಯ್ಕೆ ಮಾಡಲಾಯಿತು. ತೆಲಂಗಾಣ ರಾಜ್ಯಪಾಲ ವಿಷ್ಣುದೇವ್ ವರ್ಮಾ ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಷ್ಟಿçÃಯ ಪ್ರಶಸ್ತಿ ಪ್ರದಾನ ಮಾಡಿದರು.