ಜಿಲ್ಲೆ

ಸುಪ್ರೀಂ ತೀರ್ಪಿನಿಂದ ಸಾಮಾಜಿಕ ನ್ಯಾಯ

ಕಲಬುರಗಿ: ಸತತ ಮೂರು ದಶಕದ ಹೋರಾಟವಾಗಿದ್ದ ಒಳಮೀಸಲಾತಿ ಜಾರಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಇದು ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ದೊರೆತ ಬಹುದೊಡ್ಡ ಗೆಲುವು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಹರ್ಷ ವ್ಯಕ್ತಪಡಿಸಿದರು.
೨೦೦೫ರಲ್ಲಿ ಅಂದಿನ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ಸದಾಶಿವ ಆಯೋಗ ಜಾರಿ ಮಾಡಿ, ಒಳಮೀಸಲು ಬೇಡಿಕೆಗೆ ಬಲ ತುಂಬಿದ್ದರು. ನಂತರ ಆಯೋಗಕ್ಕೆ ಆರ್ಥಿಕ ನೆರವು ನೀಡಿ ಬಿ.ಎಸ್.ಯಡಿಯೂರಪ್ಪ ವರದಿಗೆ ಶಕ್ತಿ ತುಂಬಿದ್ದರು. ಇತ್ತೀಚೆಗೆ ಬಸವರಾಜ ಬೊಮ್ಮಾಯಿ ಅವರು ಒಳಮೀಸಲಾತಿ ನೀಡಿ, ಎಸ್ಸಿ, ಎಸ್‌ಟಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತದ ಸಂವಿಧಾನ ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಒಳ ಮೀಸಲಾತಿ ಅನುಮತಿಸುತ್ತದೆ ಎಂದು ತೀರ್ಪು ನೀಡಿರುವುದು ಸ್ವಾಗತಾರ್ಹ ನಡೆಯಾಗಿದೆ. ಒಳಮೀಸಲು ರಾಜ್ಯಗಳಿಗೆ ಜಾರಿ ತರಲು ಅಧಿಕಾರ ನೀಡಿದ್ದು, ರಾಜ್ಯದಲ್ಲಿ ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕು ಎಂದರು.
ಒಳಮೀಸಲಾತಿಯ ಕಾರ್ಯಕ್ಕೆ ರಾಷ್ಟಿçÃಯ ಸ್ವಯಂ ಸೇವಕ ಸಂಘ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಂಸದರಾದ ಗೋವಿಂದ ಕಾರಜೋಳ, ಮಾಜಿ ಸಚಿವ ಎ.ನಾರಾಯಣಸ್ವಾಮಿ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ವರಿಷ್ಠರು ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು. ಈಗಾಗಲೇ ಉದ್ಯೋಗಕ್ಕೆ ಆಹ್ವಾನಿಸಿರುವ ಅರ್ಜಿ ಪ್ರಕ್ರಿಯೆ ರದ್ದುಗೊಳಿಸಿ, ಶೀಘ್ರ ಒಳಮೀಸಲಾತಿ ವರ್ಗೀಕರಣಗೊಳಿಸಿ, ನಂತರ ಪುನಃ ಅರ್ಜಿ ಆಹ್ವಾನಿಸಬೇಕು ಎಂದು ಆಗ್ರಹಿಸಿದರು.
ರವಿಚಂದ್ರ ಕಾಂತೇಕರ್, ಎಸ್.ಜಿ.ಭಾರತಿ, ಅನೀಲ ಡೊಂಗರಗಾAವ, ಗಣೇಶ ವಳಕೇರಿ, ಗುಂಡಪ್ಪ ಸಿರಡೋಣ, ಮಹೇಂದ್ರ ಪೂಜಾರಿ ಇತರರಿದ್ದರು.