ಜಿಲ್ಲೆ

ಸುಪ್ತ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರದ ನೆರವು

ಚಿತ್ರದುರ್ಗ: ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಕಳೆದ 10 ದಿನಗಳಿಂದ ಆಯೋಜಿಸಿದ್ದ‘ಬಾಲಗೋಕುಲ’ಮಕ್ಕಳ ಉಚಿತ ಬೇಸಿಗೆ ಶಿಬಿರ ಶುಕ್ರವಾರ ಮುಕ್ತಾಯಗೊಂಡಿತು. ಶ್ರೀ ಪ್ರಸನ್ನವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಸಮಾರೋಪದಲ್ಲಿ ಮಾತನಾಡಿದ ಸಂಸ್ಥೆ ಗೌರವಾಧ್ಯಕ್ಷ ಆರ್.ಸತ್ಯಣ್ಣ,ಮಕ್ಕಳಲ್ಲಿ ಅಡಗಿದ್ದ ಸುಪ್ತ ಪ್ರತಿಭೆ ಅನಾವರಣಕ್ಕೆ ಈ ಶಿಬಿರ ನೆರವಾಗಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಚಾರ್ ಮಾತನಾಡಿ ಟಿವಿ,ಮೊಬೈಲ್ನಿಂದಾಗಿ ವಸ್ತು ನಿಷ್ಠ ಪ್ರಪಂಚವನ್ನೇ ಮರೆತಿರುವ ಈ ಸಂದರ್ಭ ದಲ್ಲಿ ಹೆಚ್ಚಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಿರುವುದು ಹರ್ಷದ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವೇಶ್ವರರ ಜಯಂತಿ ಅಂಗವಾಗಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶೈಲಜಾರೆಡ್ಡಿ,ರವಿ ಕೆ.ಅಂ ಬೇಕರ್,ನಾಗಲತಾ,ಅಂಬುಜಾಕ್ಷಿ,ನಿರ್ಮಲಾ,ಶೈಲಜಾ,ರೇಣುಕಾ,ವನಜಾಕ್ಷಮ್ಮ ಬಾಲಗೋಕುಲ,ದೇವರಾಜ್‌ಕೋಟ್ಲ,ತಿಪ್ಪೇರುದ್ರಪ್ಪ,ವಿಶ್ವನಾಥ್ ಮತ್ತಿತರರು ಇದ್ದರು. 80ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಬಿರಾರ್ಥಿಗಳಿಗೆ ಸಂಸ್ಥೆಯಿಂದ ಪ್ರಮಾಣಪತ್ರ ಹಾಗೂ ಸ್ಮರಣಿಕೆ ವಿತರಿಸಲಾಯಿತು.