ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪಿ.ಆರ್.ಸುನೀಲ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶಿವಮ್ಮ ಮಹೇಶ್ ಅಧಿಕಾರ ವಹಿಸಿಕೊಂಡರು.
ಸುನೀಲ್ ಕುಮಾರ್ ಅವರಿಗೆ ಮಾಜಿ ಅಧ್ಯಕ್ಷೆ ಶಿವಮ್ಮ ಮಹೇಶ್ ಅವರು ಪಂಚಾಯಿತಿ ಕಾನೂನು ಪುಸ್ತಕವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷೆ ಶಿವಮ್ಮ ಮಹೇಶ್ ಅವರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅಧಿಕಾರ ಹಸ್ತಾಂತರಿಸಿದರು.
ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯನ್ನು ಗ್ರಾಮಸ್ಥರು, ಹಿರಿಯ ಮುಖಂಡರು, ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಶುಭಹಾರೈಸಿದರು. ಅಲ್ಲದೆ ಉತ್ತಮ ಆಡಳಿತ ನೀಡುವಂತೆ ಮನವಿ ಮಾಡಿದರು.
ಸದಸ್ಯರಾದ ಬಿ.ಎಂ.ಸುರೇಶ್,ಮಂಜುನಾಥ್, ರಫೀಕ್‌ಖಾನ್,ಸೋಮನಾಥ್, ವಸಂತಿ, ಶಾಂತಿ, ಗೀತಾ, ಮಂಜುಳಾ, ರೇಷ್ಮಾ, ಮಾಜಿ ಸದಸ್ಯ ಪಿ.ಆರ್.ಸುಕುಮಾರ್, ಕೆ.ಇ.ಕರೀಂ,ರಹೆನಾ ಸುಲ್ತಾನ್, ಬಿಜೆಪಿ ಪಕ್ಷದ ಹಿರಿಯ ಮುಖಂಡ ವೈ.ಎಂ.ಕರುಂಬಯ್ಯ, ಸುಂಟಿಕೊಪ್ಪ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ.ನರಸಿಂಹ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಇದ್ದರು.