ಬೀದರ್: ರೈತರು ಹವಾಮಾನಕ್ಕೆ ಅನುನುಗುಣವಾಗಿ ಕೃಷಿ ಚಟುವಟಿಕೆಗಳಲ್ಲಿ ವೈಜ್ಞಾನಿಕ ಹಾಗೂ ಆಧುನಿಕ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳುವರಿ ಮತ್ತು ಆದಾಯ ಪಡೆಯಬೇಕು ಎಂದು ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಸ್.ವಿ. ಪಾಟೀಲ್ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾವಿದ್ಯಾಲಯ, ರಿಲಯನ್ಸ್ ಫೌಂಡೇಷನ್ ಹಾಗೂ ಪ್ರವರ್ದ ಸಂಸ್ಥೆಯಿಂದ ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಆಯೋಜಿಸಿದ ಟೊಮ್ಯಾಟೊ ಮತ್ತು ಮೆಣಸಿನಕಾಯಿ ಬೆಳೆಗಳಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಥ ತರಬೇತಿಗಳಲ್ಲಿ ರೈತರು ಪಾಲ್ಗೊಂಡು ಮಾಹಿತಿ ಪಡೆದು ಬೇಸಾಯದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರಿಲಾಯನ್ಸ್ ಫೌಂಡೇಷನ್ ನ ರಾಮಚಂದ್ರ ಶೇರಿಕಾರ್ ಉದ್ಘಾಟಿಸಿ ಮಾತನಾಡಿ, ಬಿತ್ತನೆ ಮೊದಲು ರೈತರು ಸಂಬಂಸಿದ ನುರಿತ ವಿಜ್ಞಾನಿಗಳಿಂದ ಸೂಕ್ತ ಸಲಹೆ ಪಡೆದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.
ಡಾ.ಅಂಬರೀಶ್, ಡಾ.ರಾಜಕುಮಾರ ಎಂ., ಡಾ.ಅರುಣಾಕುಮಾರ ಕೆ.ಟಿ., ಡಾ.ಪ್ರಶಾಂತ, ಡಾ.ಅಶೋಕ ಸೂರ್ಯವಂಶಿ, ಡಾ.ಅರವಿಂದಕುಮಾರ ಅವರು ವಿವಿಧ ವಿಷಯಗಳ ಮೇಲೆ ರೈತರಿಗೆ ಮಾಹಿತಿ ನೀಡಿದರು. ಪ್ರಗತಿಪರ ರೈತರು ಪಾಲ್ಗೊಂಡಿದ್ದರು.