ಜಿಲ್ಲೆ

ಸುದೈವಿ ಮಕ್ಕಳ ದಿನಾಚರಣೆ

ಬಸವಕಲ್ಯಾಣ: ಅನುಭವ ಮಂಟಪ ಟ್ರಸ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಜನ್ಮದಿನವನ್ನು ಸುದೈವಿ ಮಕ್ಕಳ ದಿನವನ್ನಾಗಿ ಅನುಭವ ಮಂಪಟದಲ್ಲಿ ಆಚರಿಸಲಾಯಿತು.
ಪೂಜ್ಯ ವಿ.ಸಿದ್ದರಾಮಣ್ಣ ಮಾತನಾಡಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಾದಿ ಶರಣರ ತತ್ವದಾರ್ಶ ಅಳವಡಿಸಿಕೊಂಡು ಬಸವಪರಂಪರೆ ಮುನ್ನಡೆಸುತ್ತಿದ್ದಾರೆ. ಅದ್ದಕಾಗ್ಗಿಯೇ ಪೂಜ್ಯರು ಮಾತೃಹೃದಯಿಗಳಾಗಿದ್ದಾರೆ ಎಂದರು.


ದಿನದಲಿತರ, ಬಡವರ, ಅಸಹಾಯಕರ, ನಿರಾಶ್ರಿತರ, ಶೋಷಿತರ, ವೃದ್ದರ ಕುರಿತು ಅವರ ಹೃದಯದಲ್ಲಿ ಅಪಾರ ಕರುಣೆಯಿದೆ. ಅನಾಥ ಮಕ್ಕಳಂತು ಅವರಿಗೆ ಜೀವಾಳವಾಗಿದ್ದಾರೆ. ಅವರ ಮೇಲೆ ಮಾತೃ ಹೃದಯ ಧಾರೆ ಎರೆಯುತ್ತಿದ್ದಾರೆ. ಅಂತಹ ಪೂಜ್ಯರು ಪಡೆದ ಈ ನೆಲ ಪಾವನವಾಗಿದೆ ಎಂದರು.
ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇ ವರು ಬಸವ ತತ್ವವನ್ನು ಹಂಬಲಿಸಿ ಬಂದ ನಮಂಥ ಸಾಧಕರಿಗೆ ತಾಯಿಯಾಗಿದ್ದಾರೆ. ಅವರ ಹೃದಯದಲ್ಲಿ ಪ್ರೀತಿ, ವಾತ್ಸಲ್ಯ ಕರುಣೆ ತುಂಬಿಕೊAಡಿದ್ದಾರೆ. ಹಲವು ಸವಾಲುಗಳ ಮಧ್ಯೆಯೂ ಪೂಜ್ಯರು ಧರ್ಮ ಪ್ರಚಾರದಲ್ಲಿ ತೊಡಗಿದ್ದಾರೆ. ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಪೂಜ್ಯರ ಶ್ರಮ ಮರೆಯಲು ಸಾಧ್ಯವಿಲ್ಲ ಎಂದರು.


ಬಸವ ಮಹಾಮನೆಯ ಅನಾಥ ನಿಲಯದ ಮಕ್ಕಳಿಗೆ ನೋಟಬುಕ್, ಪೆನ್, ಟಾವೆಲ್ ವಿತರಿಸಲಾಯಿತು. ವೀರೇಶ ಕುಂಬಾರ ಅಧ್ಯಕ್ಷತೆ ವಹಿಸಿದರು. ವಿಶ್ವನಾಥ ಸ್ವಾಮಿ ವಸ್ತçದ, ನಿರ್ಮಲಾ ಶಿವಣಕರ್, ಜಗನ್ನಾಥ ಬಿರಾದಾರ, ಶಂಕರ ಮದರಗೈ, ಶಂಕರ ಕೌಟೆ. ಮಹಾದೇವಪ್ಪ ಇಜಾರೆ, ಜಗನ್ನಾಥ ಕುಶನೂರೆ, ಹಾಲಮ್ಮತಾಯಿ ಪಾಟೀಲ್, ಶ್ರೀದೇವಿ ಕಾಕನಾಳೆ, ಸುಮಿತ್ರಾ ದಾವಣಗಾವೆ, ರಾಣಿ ವಡ್ಡೆ, ಸೋನಾಲಿ ಹಡಪದ, ಕವಿತಾ ಸಜ್ಜನ ಇತರರಿದ್ದರು.
ಸೌರಭ ಶಿವಣಕರ ದಂಪತಿ ಬಸವಗುರುಪೂಜೆ ಮಾಡಿದರು. ರಾಜಕುಮಾರ ಹೂಗಾರ ವಚನ ಗಾಯನ ಮಾಡಿದರು. ಮಲ್ಲಿಕಾರ್ಜುನ ಅಲಗೂಡೆ ನಿರೂಪಣೆ ಮಾಡಿದರು. ಶಿವಕುಮಾರ ಬಿರಾದಾರ ಸ್ವಾಗತಿಸಿದರು.