ಜಿಲ್ಲೆ

ಸುದರ್ಶನ್‌ಗೆ ಕರಾಟೆ ಚಾಂಪಿಯನ್ಶಿಪ್ ಪದಕ

ಚಿತ್ರದುರ್ಗ: ತಾಲೂಕಿನ ಸಿದ್ಧಾಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುದರ್ಶನ್‌ಗೆ ಕರಾಟೆ ಓಪನ್ ಚಾಂಪಿಯನ್ಶಿಪ್‌ನಲ್ಲಿ ಬಂಗಾರದ ಪದಕ ಲಭಿಸಿದೆ.

ಕೊಯಿಮತ್ತೂರ್‌ನಲ್ಲಿ ಈಚೆಗೆ ನಡೆದ ಕರಾಟೆ ಓಪನ್ ಚಾಂಪಿಯನ್ಶಿಪ್ ಅಂಡ್ ಮಾಸ್ಟರ್ ಆಂತಮ್ಸ್ ಟ್ರೋಫಿಯ 16ನೇ ವಯಸ್ಸಿನ ವಿಭಾಗದಲ್ಲಿ ಸ್ಪರ್ಧಿಸಿದ್ದು, ಜಯಗಳಿಸಿ ಪದಕ ಪಡೆದಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಗ್ರಾಮಸ್ಥರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.