ಚಿಕ್ಕಮಗಳೂರು: ತರೀಕೆರೆಯಲ್ಲಿ ೬೦ ವರ್ಷಗಳ ಹಿಂದೆ ನಡೆದ ಜನಪದ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಗೊ.ರು ಚನ್ನಬಸಪ್ಪನವರು ವಿರಚಿತ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಕೃತಿಯ ಮೂರನೇ ಆವೃತ್ತಿ ೬೦ವರ್ಷಗಳ ನಂತರ ಮೂರನೇ ಆವೃತ್ತಿ ಬಿಡುಗಡೆಯಾಗುತ್ತಿರುವುದು ಆ ಕೃತಿಯ ಮೌಲ್ಯತೆಗೆ ಸಾಕ್ಷಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಸುದ್ದಿರಾಜು ಪ್ರಕಾಶನ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ೧೯೬೭ ರಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಜಾನಪದ ಸಮ್ಮೇಳನದ ೮೦೦ ಪುಟಗಳ ಸ್ಮರಣ ಗ್ರಂಥ ಹೊನ್ನಬಿತ್ತೇವು ಹೊಲಕೆಲ್ಲ ಮೂರನೇ ಆವೃತ್ತಿ ಬಿಡುಗಡೆ ಸಮಾರಂಭ ದಿವ್ಯ ಸಾನಿಧ್ಯ ವಹಿಸಿ ಮೂರನೇ ಆವೃತ್ತಿ ಬಿಡುಗಡೆಗೊಳಿಸಿ ಆಶೀರ್ವವನ ನೀಡಿದರು.
ಈ ಕೃತಿಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರು ಬರೆದಿರುವ ಅತ್ಯಮೂಲ್ಯ ಲೇಖನಗಳಿವೆ. ಕನ್ನಡ ಜನಪದ ಸಾಹಿತ್ಯವೇ ಅಲ್ಲದೆ ನಮ್ಮ ನೆರೆ ಹೊರೆಯ ರಾಜ್ಯಗಳ ಬೇರೆ ಬೇರೆ ಭಾಷೆಯ ಜನಪದ ಸಾಹಿತ್ಯ ಪ್ರಖರವಾಗಿ ಬೆಳೆದಿರುವ ಬಗ್ಗೆ ಮನೋಜ್ಞವಾಗಿ ಉಲ್ಲೇಖಿಸಲಾಗಿದೆ ಎಂದರು.
ಜಾನಪದ ಗೀತೆಗಳು, ತಾಯಿ ಮಕ್ಕಳ ಸಂಬAಧ ಸೇರಿದಂತೆ ಹಲವು ಮನುಷ್ಯ ಸಂಬAಧಿತ ಸಮಸ್ಯೆಗಳಿಗೆ ಈ ಕೃತಿಯಲ್ಲಿ ಪರಿಹಾರವಿದೆ. ಅದರೊಂದಿಗೆ ಜನಪದ ಸಾಹಿತ್ಯ ಸಂಗ್ರಹಣೆಗೆ ಇರುವ ತೊಡಕುಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನಪದರು ಮತ್ತು ಜನಪದ ಸಾಹಿತ್ಯ ಈ ದೇಶದ ಆಸ್ತಿ. ಜಾನಪದರು ಪುಸ್ತಕವನ್ನು ನೋಡಿದವರಲ್ಲ. ತಮ್ಮ ಜೀವನದ ಘಟನೆಗಳನ್ನು ಹಾಡಾಗಿ ಹಾಡುವ ಮೂಲಕ ತಮ್ಮ ದುಃಖ ದುಮಾನಗಳನ್ನು ಹಾಡುಗಳ ಮೂಲಕ ಪರಿಚಯಿಸಿದ್ದಾರೆ ಎಂದು ಹೇಳಿದರು.
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕೃತಿಯ ಗ್ರಂಥಕರ್ತ ಗೋ.ರು ಚನ್ನಬಸಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಆಧುನಿಕತೆ ಸೆಳೆತಕ್ಕೆ ಸಿಲುಕಿ ನಮ್ಮ ಹಳ್ಳಿಗಳ ಬದುಕು ಬದಲಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಜಾನಪದ ಅಕಾಡೆಮಿ ಆರಂಭಗೊಳ್ಳಲು ಈ ಕೃತಿ ಪ್ರೇರಣಾ ಶಕ್ತಿ ಎಂದು ಹೇಳಿದರು
ತಾವು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೀಡಿದ ಮನವಿಯನ್ನು ಪುರಸ್ಕರಿಸಿ ಅಂದಿನ ಸರ್ಕಾರ ಹಾವೇರಿಯ ಶಿಗ್ಗಾಂವಿಯಲ್ಲಿ ಜನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು. ಆದರೆ ನಂತರ ಬಂದ ಸರ್ಕಾರಗಳು ವಿಶ್ವವಿದ್ಯಾಲಯಕ್ಕೆ ಅಗತ್ಯ ನೆರವು ನೀಡದಿರುವುದು ವಿಷಾದನೀಯ ಎಂದರು.
ಜನಪದ ವಿಶ್ವವಿದ್ಯಾಲಯ ಎಂಬುದು ಗ್ರಾಮೀಣ ಬುಡಕಟ್ಟು ಸಮುದಾಯಕ್ಕೆ ಹಾಗೂ ಅವರ ಬದುಕುಗಳಿಗೆ ನೇರ ಸಂಬAಧ ಹೊಂದಿದೆ. ಪ್ರಯೋಗ,ಪ್ರಾತ್ಯಕ್ಷಿಕೆಗಳ ಮೂಲಕ ವಿಶ್ವವಿದ್ಯಾಲಯಗಳು ಕಾರ್ಯ ಶೀಲವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸರ್ಕಾರಗಳು ಜಾನಪದ ವಿಶ್ವವಿದ್ಯಾಲಯದ ವೈಶಿಷ್ಟö್ಯತೆಗಳನ್ನು ಪರಿಗಣಿಸಿ ಅದನ್ನು ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸಬೇಕು. ಜಾನಪದ ಕ್ಷೇತ್ರದ ತಜ್ಞರು ಜಾನಪದವನ್ನು ಉಪೇಕ್ಷಿಸದಂತೆ ಒಕ್ಕೋರಲ್ಲಿನಿಂದ ಆಗ್ರಹಿಸುವ ಅಗತ್ಯವಿದೆ ಎಂದು ಹೇಳಿದರು.
ಗೂ.ರು.ಚ ಕುರಿತು ಜಾನಪದ ಸಾಹಿತಿ ಬಸವರಾಜು ನೆಲ್ಲೀಸರ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಾನಪದ ಕಲಾವಿದ ಜನಾರ್ಧನ, ಜನಪರ ಹೋರಾಟಗಾರರಾದ ರಾಧಸುಂದ್ರೇಶ್, ರಾಜ್ಯ ಪ್ರಶಸ್ತಿ ವಿಜೇತ ಜಾನಪದ ಕಲಾವಿದೆ ಲಕ್ಷ್ಮೀ ದೇವಮ್ಮ, ಸಾಹಿತಿ ಮಧುಸೂದನ್, ಪತ್ರಕರ್ತರಾದ ಕಂ.ಕ ಮೂರ್ತಿ, ಉದಯ್ ಕುಮಾರ್, ರೈತ ಹೋರಾಟಗಾರ ಕೆ.ಕೆ ಕೃಷ್ಣೇಗೌಡ, ಕ್ರೀಡಾ ತರಬೇತಿದಾರ ಐ.ಫ್ರಾನ್ಸಿಸ್ ಅವರನ್ನು ಅಭಿನಂದಿಸಲಾಯಿತು.
ಸುದ್ದಿರಾಜು ಪ್ರಕಾಶನದ ಎನ್. ರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಹಿರಿಯ ಪತ್ರಕರ್ತ ವೈ.ಜಿ.ಅಶೋಕ್ ಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ರವೀಶ್ ಕ್ಯಾತನಬೀಡು, ಖ್ಯಾತವೈದ್ಯಡಾ. ಜೆ.ಪಿ.ಕೃಷ್ಣೇಗೌಡ, ರೈತ ಮುಖಂಡ ಗುರುಶಾಂತಪ್ಪ, ಬಿ.ಎಂ. ಮಂಜುನಾಥ್‌ಸ್ವಾಮಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಎಂ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.