ಕೊಳ್ಳೇಗಾಲದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 107ನೇ ಜಯಂತಿ ಮಹೋತ್ಸವ ಹಾಗೂ ಪದಗ್ರಹಣ ಸಮಾರಂಭಕ್ಕೆ ವೇದಿಕೆ ಮೇಲಿನ ಗಣ್ಯರು ಚಾಲನೆ ನೀಡಿದರು. ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಪರಿಮಳಾ ನಾಗಪ್ಪ, ವಸಂತಮ್ಮ ಮಹದೇವಪ್ಪ, ಮಲ್ಲಿಕಾರ್ಜುನಸ್ವಾಮಿ, ರೂಪಾ ತೋಟೇಶ್ ಇತರರಿದ್ದರು. 
ಜಿಲ್ಲೆ

ಸುತ್ತೂರು ಮಠದ ಅಭಿವೃದ್ಧಿಗೆ ಶಿವರಾತ್ರಿ ರಾಜೇಂದ್ರ ಶ್ರೀ ಕಾರಣ

ಕೊಳ್ಳೇಗಾಲ: ಇಡೀ ವ್ಯವಸ್ಥೆಯೇ ಇಂದು ಸುತ್ತೂರು ಮಠದ ಕಡೆ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಎಂದು ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ಬಣ್ಣಿಸಿದರು.


ಪಟ್ಟಣದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ 107ನೇ ಜಯಂತಿ ಮಹೋತ್ಸವ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸುತ್ತೂರು ಮಠದ ಬೆಳೆವಣಿಗೆಗೆ ಶ್ರೀ ರಾಜೇಂದ್ರ ಸ್ಬಾಮಿಗಳು ಕಾರಣ. ಅದನ್ನು ಇಮ್ಮಡಿಗೊಳಿಸಿದ ಕೀರ್ತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳಿಗೆ ಸಲ್ಲುತ್ತದೆ. ಅವರ ಸಾನ್ನಿಧ್ಯದಲ್ಲಿ ನಾಡಿನ ಜನತೆಯ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಕಾರ್ಯಗಳು ನಡೆಯುತ್ತಿವೆ ಎಂದರು.

ರಾಜ್ಯದಲ್ಲಿ ಮಠಗಳು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಿವೆ. ಅಂತೆಯೇ ಆ ಕಾಲದಲ್ಲೇ ಜೆಎಸ್‌ಎಸ್ ಮಹಿಳಾ ಕಾಲೇಜುಗಳನ್ನು ನಿರ್ಮಿಸಿ ಹೆಣ್ಣುಮಕ್ಕಳಿಗೆ ಅಕ್ಷರ ನೀಡಿದ ಕೀರ್ತಿ ಶ್ರೀ ರಾಜೇಂದ್ರ ಸ್ವಾಮಿಗಳಿಗೆ ಸಲ್ಲುತ್ತದೆ. ಇದ್ದರಿಂದ ಹೆಣ್ಣು ಮಕ್ಕಳು ಶಿಕ್ಷಿತರರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂತಹ ಪುಣ್ಯವಂತರ ಜಯಂತಿ ಆಚರಣೆಯಲ್ಲಿ ಕದಳಿ ಮಹಿಳಾ ಘಟಕದ ಪದಗ್ರಹಣ ಸಮಾರಂಭ ಏರ್ಪಡಿಸಿರುವುದು ವಿಶೇಷವಾಗಿದೆ ಎಂದರು.

ಪ್ರಸ್ತುತ ನಾವು ಧರ್ಮವಂತರಾಗಿದ್ದೀವಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿಂದೆ ಅಕ್ಷರ ಜ್ಞಾನದ ಸಮಸ್ಯೆ ಇತ್ತು, ಆದರೀಗ ಇಲ್ಲ. ಪಾಲಕರು ಮಕ್ಕಳಿಗೆ ಧರ್ಮ ಹಾಗೂ ಸಂಸ್ಕಾರದ ಬಗ್ಗೆ ಚಿಕ್ಕ ವಯಸ್ಸಿನಿಂದಲೆ ಅರಿವು ಮೂಡಿಸುವುದು ಅಗತ್ಯವಿದೆ ಎಂದರು.

ಕದಳಿ ವೇದಿಕೆಯ ನೂತನ ಅಧ್ಯಕ್ಷೆ ರೂಪಾ ತೋಟೇಶ್ ಮಾತನಾಡಿ, ಅಕ್ಕನ ಬಳಗದಲ್ಲೂ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ, ಇದೀಗ ಕದಳಿ ವೇದಿಕೆ ಅಧ್ಯಕ್ಷೆಯಾಗುವ ಸುಧರ್ಭ ನನಗೆ ಒದಗಿದೆ. ಮತಷ್ಟು ಉತ್ತಮವಾದ ಕೆಲಸಗಳನ್ನು ಮಾಡುತ್ತೇನೆ ಎಂದರು.

ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿದರು. ನೂತನ ಪದಾಧಿಕಾರಿಗಳು: ಕದಳಿ ಮಹಿಳಾ ವೇದಿಕೆಯ ತಾಲೂಕು ನೂತನ ಅಧ್ಯಕ್ಷರಾಗಿ ರೂಪಾ ತೋಟೇಶ್, ಕಾರ್ಯದರ್ಶಿ ಗೀತಾ ಮಂಜುನಾಥ್, ಉಪಾಧ್ಯಕ್ಷೆ ಅನುಪಮಾ ಗುರಪ್ಪ, ಖಜಾಂಚಿ ಲೀಲಾವತಿ ಶಿವಕುಮಾರ್, ಸಹ ಕಾರ್ಯದರ್ಶಿ ವಿಜಯ ಗುರುರಾಜ್, ಸಂಚಾಲಕಿಯರಾದ ಜಗದಾಂಬ ಸದಾಶಿವ ಮೂರ್ತಿ, ಚಂಪಾ ವಿಜಯ್ ಕುಮಾರ್, ನಿರ್ದೇಶಕರಾದ ಶೋಭಾ ನಾಗರಾಜು, ಪ್ರಮೀಳಾ ನಂಜಪ್ಪ, ನಾಗವೇಣಿ ನಾಗಣ್ಣ, ಅರುಣಾ ಕಾರ್ತಿಕ್ ಆಯ್ಕೆಯಾಗಿದ್ದು ಪದಗ್ರಹಣ ಮಾಡಿದರು.

ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ವಸಂತಮ್ಮ ಮಹದೇವಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ತಾಲೂಕು ಅಧ್ಯಕ್ಷ ನಾಗರಾಜು, ಅಕ್ಕನ ಬಳಗದ ಕಾತ್ಯಾಯಿನಿ, , ಕಾರ್ಯದರ್ಶಿ ಗೀತಾ ಮಂಜುನಾಥ್ ಮತ್ತಿತರಿದ್ದರು.