ಚನ್ನರಾಯಪಟ್ಟಣ ತಾಲೂಕು ಜಿನ್ನೇನಹಳ್ಳಿ ಗ್ರಾಮದಲ್ಲಿ ಹೊತ್ತು ಉರಿಯುತ್ತಿರುವ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ.  
ಜಿಲ್ಲೆ

ಸುಟ್ಟು ಕರಕಲಾದ ವಾಸದ ಮನೆ

Hassan


ಚನ್ನರಾಯಪಟ್ಟಣ: ತಾಲೂಕಿನ ಜಿನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಾಸದಮನೆ ಸುಟ್ಟು ಕರಕಲಾಗಿದೆ.


ಗ್ರಾಮದ ಕುಮಾರ್ ಎಂಬುವರಿಗೆ ಸೇರಿದ ಮನೆಯು ಹೊರ ವಲಯದ ತೋಟದ ಸಾಲಿನಲ್ಲಿದ್ದು, ಮನೆಯ ಸದಸ್ಯರು ಪಿತೃಪಕ್ಷ ಸಲುವಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿಯುತಿದ್ದಂತೆಯೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ನೀರು ಎರಚಿ, ಹಸಿ ಸೊಪ್ಪು ಹಾಗೂ ತೆಂಗಿನ ಗರಿ ಹಿಡಿದು ನಂದಿಸಲು ಪ್ರಯತ್ನಿಸಿದರಾದರೂ ಬೆಂಕಿ ಇಡೀ ಮನೆಯನ್ನೇ ಆವರಿಸಿ ಹೊತ್ತಿ ಉರಿಯಿತು.


ಬಳಿಕ ಸ್ಥಳಕ್ಕೆ ಚನ್ನರಾಯಪಟ್ಟಣದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಬಟ್ಟೆ-ಬರೆ, ಪಾತ್ರೆಗಳು ಹಾಗೂ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು.
ಸ್ಥಳಕ್ಕೆ ವಿಎ ವೀರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.