ಜಿಲ್ಲೆ

ಸುಜಲಾನ್ ಭದ್ರತಾ ಸಿಬ್ಬಂದಿ ಧರಣಿ 27ನೇ ದಿನಕ್ಕೆ

ಮುಂಡರಗಿ: ತಾಲೂಕಿನ ಕಪ್ಪತಗುಡ್ಡದ ಸುಜಲಾನ್ ಕಂಪನಿಯ ಪವನ ವಿದ್ಯುತ್ ಘಟಕಗಳ ಭದ್ರತಾ ಸಿಬ್ಬಂದಿ 10 ತಿಂಗಳ ಬಾಕಿ ವೇತನ ಪಾವತಿ ಹಾಗೂ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಿ ಭದ್ರತಾ ಸಿಬ್ಬಂದಿ ಮುಂಡರಗಿ ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರಕ್ಕೆ 26 ದಿನ ಪೂರೈಸಿತು.

ಸ್ಥಳಕ್ಕಾಗಮಿಸಿದ ರೋಣ ಶಾಸಕ ಕಳಕಪ್ಪ ಬಂಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಜಿಲ್ಲಾಧಿಕಾರಿ ಜೊತೆಗೆ ರ್ಚಚಿಸಿ ಭದ್ರತಾ ಸಿಬ್ಬಂದಿ ಸಮಸ್ಯೆಯನ್ನು ತಕ್ಷಣ ಇತ್ಯರ್ಥಪಡಿಸುವಂತೆ ಮನವಿ ಮಾಡುತ್ತೇನೆ. ನಿಮ್ಮೊಂದಿಗೆ ನಾವು ಮತ್ತು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಇರುತ್ತೇವೆ. ನ್ಯಾಯ ಕೊಡಿಸುತ್ತೇವೆ ಎಂದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ನಿರಂತರ 26 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದರೂ ಭದ್ರತಾ ಸಿಬ್ಬಂದಿ ಬೇಡಿಕೆ ಈಡೇರಿಸುವ ಕೆಲಸ ನಡೆದಿಲ್ಲ. 10 ತಿಂಗಳ ಬಾಕಿ ವೇತನ ನೀಡಬೇಕು. 130 ಭದ್ರತಾ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸಬೇಕು ಎಂದರು.

ಎಸ್.ವಿ. ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ರವಿರಾಜ ಚವ್ಹಾಣ, ರವಿ ಕರಿಗಾರ, ಪ್ರಶಾಂತಗೌಡ ಪಾಟೀಲ, ದಸ್ತಗೀರಸಾಬ್ ಹೊಸಮನಿ, ಸೋಮು ಹಕ್ಕಂಡಿ, ಅಂದಪ್ಪ ಹಾರೋಗೇರಿ, ಬಸವರಾಜ ಸಂಗನಾಳ, ನೂರಹ್ಮದ ಮಕಾಂದಾರ, ಎನ್.ಟಿ. ಪೂಜಾರ, ಎಂ.ಯು. ಮಕಾಂದಾರ, ನೂರೇಶ್ ಬನಜಾರ, ಈರಯ್ಯ ಲಕ್ಷ್ಮೇಶ್ವರಮಠ, ಆರ್.ಕೆ. ಮೋರಗೇರಿ, ಐ.ಡಿ. ಖತೀಬ್, ರವೀಂದ್ರ ಜವಿ, ವೀರೇಶ ರಾವುತುರ, ಮಾರುತಿ ಕೆಲೂರ, ಇತರರಿದ್ದರು.