ಬೀದರ್: ಈಚೆಗಷ್ಟೇ ರಾಜೀನಾಮೆ ಕೊಟ್ಟು ಬಿಜೆಪಿ ತೊರೆದಿದ್ದ ನಾಯಕಿ ಸುಚಿತ್ರಾ ಹಂಗರಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಔರಾದ್ ತಾಲ್ಲೂಕಿನ ಏಕಂಬಾದಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್ ಸಿಂಧೆ ಅವರ ಸಮ್ಮುಖದಲ್ಲಿ ಪಕ್ಷ ಸೇರಿದರು.
ಮುಖಂಡರಾದ ರಘುನಾಥರಾವ್ ಜಾಧವ್, ರವಿ ಸ್ವಾಮಿ, ರಮೇಶ ದೇವಕತೆ, , ಸೋನಿಯಾ ಮುಧೋಳ್(ಕೆ), ಭೀಮಣ್ಣ ಮೇತ್ರೆ, ಕಾಂಗ್ರೆಸ್ ಜಿಲ್ಲಾ ಎಸ್.ಟಿ. ಘಟಕದ ಉಪಾಧ್ಯಕ್ಷ ರಾಜಕುಮಾರ ಕಂದಗೂಳೆ, ಸಂದೀಪ್ ರೆಡ್ಡಿ, ನಂದಕಿಶೋರ ಇದ್ದರು.