ಜಿಲ್ಲೆ

ಸುಗ್ಗಿ ದೇವಿರಮ್ಮಮತ್ತು ಕುದುರೆ ಕುಮಾರಸ್ವಾಮಿ ನೂತನ ದೇಗುಲ ಲೋಕಾರ್ಪಣೆ.

ಬೇಲೂರು: ತಾಲೂಕಿನ ಮೊಗಸಾವರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸುಗ್ಗಿ ದೇವಿರಮ್ಮ, ಮತ್ತು ಕುದುರೆ ಕುಮಾರಸ್ವಾಮಿ ನೂತನ ದೇಗುಲ ಲೋಕಾರ್ಪಣೆ, ದೇವತಾ ಪ್ರತಿಷ್ಠಾಪನಾ ಮಹೋತ್ಸವವನ್ನು ದಿನಾಂಕ:25-1-2023 ರಿಂದ 27-1-2023ರ ವರೆಗೆ ಆಯೋಜಿಸಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇಗುಲ ಸಮಿತಿ ಅಧ್ಯಕ್ಷ ಅದ್ದೂರಿ ಚೇತನ ಕುಮಾರ್ ಹೇಳಿದರು.


ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಮೊಗಸಾವರ ಗ್ರಾಮದಲ್ಲಿ 3 ತಲೆಮಾರಿನ ಹಿಂದೆ ಸುಗ್ಗಿ ದೇವಿರಮ್ಮ ದೇಗುಲವಿತ್ತು ಎಂಬ ಬಗ್ಗೆ ಕೆಲ ಐತಿಹ್ಯ ಮತ್ತು ತಾಂಬೂಲ ಶಾಸ್ತ್ರದಿಂದ ತಿಳಿದ ಹಿನ್ನೆಲೆಯಲ್ಲಿ ನೂತನ ದೇಗುಲವನ್ನು ಗ್ರಾಮಸ್ಥರ ಹಾಗೂ ವಿವಿಧ ಗಣ್ಯರ ಸಹಕಾರದಿಂದ ಸುಂದರ ನಿರ್ಮಿಸಲಾಗಿದೆ. ಜನವರಿ 25 ರಿಂದ ದೇಗುಲದಲ್ಲಿ ದೇವತಾ ಪೂಜೆ ನಡೆಸಲಾಗುತ್ತದೆ. ದಿನಾಂಕ-27-01-2023 ರಂದು ಶ್ರೀ ಸುಗ್ಗಿ ದೇವಿರಮ್ಮ ದೇಗುಲ ಲೋಕಾರ್ಪಣೆಯನ್ನು ವಿವಿಧ ಮಠದ ಸ್ವಾಮೀಜಿಗಳು ನೆರವೇರಿಸಲಿದ್ದಾರೆ. ದೇಗುಲ ಉದ್ಘಾಟನೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗಮಹಾಸ್ವಾಮಿಜಿ, ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಕಾರ್ಜುವಳ್ಳಿ ಮಠದ ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಾಸನ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಗೋಪಾಲಯ್ಯ, ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು, ಭಕ್ತರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.


ಸುದ್ದಿಗೋಷ್ಟಿಯಲ್ಲಿ ದೇಗುಲ ಸಮಿತ ಗೌರವಾಧ್ಯಕ್ಷ ಎಂ.ಎಲ್.ರುದ್ರೇಶ್, ಕಾರ್ಯದರ್ಶಿ ಯಶವಂತ್, ಖಜಾಂಚಿ ಉಮಾ ಮಹೇಶ್ವರ್, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷ ಉಮಾಮಹೇಶ್ವರ್, ಮಾದ್ಯಮ ಕಾರ್ಯದರ್ಶಿ ಶಿವಕುಮಾರ್ ಇದ್ದರು.