ನಿಪ್ಪಾಣಿ: ನಗರದಿಂದ ತಾಲೂಕಿನ ಶಿರಗುಪ್ಪಿ, ಶೆಂಡೂರು, ಗೊಂದುಗುಪ್ಪಿ ಗ್ರಾಮಗಳಿಗೆ ತೆರಳುವ ಮಾರ್ಗದಲ್ಲಿದ್ದ ನಾಲೆಗಳ ಮೇಲೆ ಸೇತುವೆ ನಿರ್ಮಿಸಬೇಕೆಂದು ಬೇಡಿಕೆಯಿಟ್ಟಿದ್ದ ಗ್ರಾಮಸ್ಥರ ಬಹುದಿನದ ಕನಸು ಈಡೇರಿದ್ದು, ೧ ಕೋಟಿ ರೂ. ನಿಧಿಯಿಂದ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಶಿರಗುಪ್ಪಿ, ಶೇಂಡೂರ ಗ್ರಾಮಗಳಲ್ಲಿ ಶುಕ್ರವಾರ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಾನು ಶಾಸಕಿ ಆಗುವ ಮೊದಲು, ಮಳೆಗಾಲದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಳ್ಳುವುದು, ಹೊಲಗಳಿಗೆ ನುಗ್ಗಿ ಬೆಳೆಗಳ ಹಾನಿ ಸೇರಿ ವಿವಿಧ ಸಮಸ್ಯೆ ಉದ್ಭವಿಸುತ್ತಿದ್ದವು. ಶಾಸಕಿಯಾದ ಬಳಿಕ ವಿವಿಧೆಡೆ ಸೇತುವೆ ನಿರ್ಮಿಸಿ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಸೇತುವೆ ನಿರ್ಮಾಣದಿಂದ ಸಂಚಾರ ಸುಗಮವಾಗಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಎಸ್.ಕೆ. ಎಂಟತ್ತಿನವರ, ಇಂಜಿನಿಯರ್‌ಗಳಾದ ವಿಜಯ ಭಂಡಾರಕರ, ಪಂಕಜ ರಾಯಮಾನೆ, ನಗರಸಭೆ ಅಧ್ಯಕ್ಷೆ ಸೋನಲ ಕೊಠಡಿಯಾ, ಸದಸ್ಯ ಜಯವಂತ ಭಾಟಲೆ, ರಾಜು ಗುಂದೇಶಾ, ಸುನೀಲ ಪಾಟೀಲ, ಗ್ರಾಪಂ ಅಧ್ಯಕ್ಷ ಬಾಳಾಸಾಹೇಬ ಕಾಂಬಳೆ, ಸದಸ್ಯ ಸುಜಾತಾ ಕದಂ, ಸೋಮು ರಾಯಮಾನೆ, ದಿಗ್ವಿಜಯ ನಿಂಬಾಳ್ಕರ್, ಸಮರ್ಜಿತ ನಿಂಬಾಳ್ಕರ್, ಸುನೀಲ ವಡಗಾವೆ, ಸೂರಜ ಖವರೆ ಇತರರು ಇದ್ದರು.