ಬೆಳಗಾವಿ: ನಗರದಲ್ಲಿ ಈದ್-ಇ-ಮಿಲಾದ್ ಹಬ್ಬದ ಮೆರವಣಿಗೆ ಪ್ರಯುಕ್ತ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಅ.9ರಂದು ನಗರದ ಪ್ರಮುಖ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗ ಬಳಸಿಕೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.
ಭಾನುವಾರ ಈದ್-ಇ-ಮಿಲಾದ್ ಹಬ್ಬದ ಮೆರವಣಿಗೆ ಬೆಳಗ್ಗೆ 8ರಿಂದ ಪಿಂಪಳಕಟ್ಟಾ ಹತ್ತಿರ ಪ್ರಾರಂಭವಾಗಿ ದೇಶಪಾಂಡೆ ಪಂಪ್, ಫೋರ್ಟ್ ರೋಡ್ ನೋ ಎಂಟ್ರಿ, ಮುಜಾವರ್ ಖೂಟ್, ಕೇಂದ್ರ ಬಸ್ ನಿಲ್ದಾಣ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಡಿಸಿ ಆಫೀಸ್ ಗೇಟ್, ಚನ್ನಮ್ಮ ಸರ್ಕಲ್, ಕಾಲೇಜ್ ರೋಡ್, ಯಂಡೆ ಖೂಟ್, ಬೋಗಾರವೇಸ್ ಸರ್ಕಲ್, ಮಂಗಸೂಳಿ ಖೂಟ್, ಫಿಶ್ ಮಾರ್ಕೆಟ್, ಗ್ಲೋಬ್ ಸರ್ಕಲ್, ಕ್ಯಾಂಪ್‌ದಲ್ಲಿರುವ ಅಸದಖಾನ್ ದರ್ಗಾದಲ್ಲಿ ಸಂಜೆ ಮುಕ್ತಾಯಗೊಳ್ಳಲಿದೆ.
ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪುರ ಕಡೆಯಿಂದ ಚನ್ನಮ್ಮ ಸರ್ಕಲ್ ಮೂಲಕ ಗೋವಾ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಬಾಕ್ಸೈಟ್ ರೋಡ್ ಮೂಲಕ ಹಿಂಡಲಗಾ ಫಾರೆಸ್ಟ್ ನಾಕಾದಿಂದ ಎಡ ತಿರುವು ಪಡೆದು ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಕೇಂದ್ರೀಯ ವಿದ್ಯಾಲಯ ನಂ.2, ಶರ್ಕತ ಪಾರ್ಕ್, ಗವಳಿ ಗಲ್ಲಿ ಕ್ರಾಸ್, ಸೇಂಟ್ ಪಾಲ್ ಸ್ಕೂಲ್ ಹಿಂದಿನ ರಸ್ತೆ, ಮಿಲಿಟರಿ ಮಹಾದೇವ ಮಂದಿರ ಹತ್ತಿರ ಕಾಂಗ್ರೆಸ್ ರೋಡ್ ಮೂಲಕ ಖಾನಾಪುರ ರಸ್ತೆ ಸೇರಿ ಮುಂದೆ ಸಾಗುವುದು.
ಖಾನಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿ ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪೂರ ಸಾಗುವ ಎಲ್ಲ ಮಾದರಿಯ ವಾಹನಗಳು 3ನೇ ರೈಲ್ವೆ ಗೇಟ್, ಕಾಂಗ್ರೆಸ್ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರದಿಂದ ಎಡತಿರುವ ಪಡೆದುಕೊಂಡು ಶರ್ಕತ ಪಾರ್ಕ ಕೇಂದ್ರೀಯ ವಿದ್ಯಾಲಯ ನಂ.2, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್).ಗಾಂಧಿ ಸರ್ಕಲ್ (ಅರಗನ ತಲಾಬ)ದಲ್ಲಿ ಎಡತಿರುವ ಪಡೆದು ಗಣೇಶ ಮಂದಿರ ಹಿಂಡಲಗಾ ರಸ್ತೆ, ಡಬಲ್ ರೋಡ್ ಮೂಲಕ ಬಾಕ್ಸೈಟ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವುದು.
ಖಾನಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿ ಗೋಕಾಕ, ಯರಗಟ್ಟಿ, ಧಾರವಾಡ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳು 3ನೇ ರೈಲ್ವೆ ಗೇಟ್, ಅನಗೋಳ ನಾಕಾ, ಆರ್‌ಪಿಡಿ ಸರ್ಕಲ್, ಗೋವಾವೇಸ್ ಸರ್ಕಲ್‌ದಿಂದ ಮಹಾತ್ಮಾ ಪುಲೆ ರಸ್ತೆಯ ಮುಖಾಂತರ ಬ್ಯಾಂಕ ಆಫ್ ಇಂಡಿಯಾ ಹೊಸ ರಸ್ತೆಯ ಮೂಲಕ ಹಳೆ ಪಿಬಿ ರೋಡ್ ಯಡಿಯೂರಪ್ಪ ಮಾರ್ಗವಾಗಿ ಅಲಾರವಾಡ ಬ್ರಿಡ್ಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವುದು.
ಗೋಕಾಕ, ಯರಗಟ್ಟಿ, ಧಾರವಾಡ ಕಡೆಯಿಂದ ಗೋವಾ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಅಲಾರವಾಡ ಅಂಡರ್ ಬ್ರಿಡ್ಜ್ ಮೂಲಕ ತಿರುವು ಪಡೆದು ಹಳೆ ಪಿಬಿ ರೋಡ್ ಮೂಲಕ ಹೊಸೂರ ಪಿಂಪಳಕಟ್ಟಾ ಮುಂದೆ ಎಡ ತಿರುವು ಪಡೆದು ಬ್ಯಾಂಕ್ ಆಪ್ ಇಂಡಿಯಾ ಡಬಲ್ ರೋಡ್ ಹಾಗೂ ಗೋವಾವೇಸ್ ಸರ್ಕಲ್ ಮೂಲಕ ಸಾಗಬೇಕು ಎಂದು ತಿಳಿಸಲಾಗಿದೆ.