ಬಾಗಲಕೋಟೆ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಏಣಿಕೆ ಕಾರ್ಯ ಜೂ.೪ ರಂದು ನಡೆಯಲಿದ್ದು, ಸುಗಮವಾಗಿ ಮತ ಏಣಿಕೆ ಕಾರ್ಯ ನಡೆಸುವಂತೆ ಮತ ಏಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಽಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಽಕಾರಿ ಆಗಿರುವ ಜಿಲ್ಲಾ ಚುನಾವಣಾಽಕಾರಿ ಜಾನಕಿ ಕೆ.ಎಂ ಸೂಚಿಸಿದರು.
ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಽಸಿದಂತೆ ಮತ ಏಣಿಕೆಗೆ ನಿಯೋಜಿಸಿರುವ ಅಽಕಾರಿ, ಸಿಬ್ಬಂದಿಗಳಿಗೆ ಶನಿವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಿದ ೨ನೇ ಹಂತದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂ.೪ ರಂದು ನಡೆಯುವ ಮತ ಏಣಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಸಿದ್ದತೆ ಕೈಗೊಳ್ಳಬೇಕು. ಯಾವುದೇ ಗೊಂದಲಕ್ಕೊಳಗಾಗದೇ ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು ಎಂದರು.
ಯಾವುದೇ ಸಮಸ್ಯೆ ಉದ್ಬವಿಸಿದಲ್ಲಿ ತಕ್ಷಣ ಸಂಬಂಽಸಿದ ಚುನಾವಣಾಽಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದೇ ಮತ ಏಣಿಕೆ ಕಾರ್ಯ ನಿರ್ವಹಿಸಲು ತಮಗೆ ತಿಳಿಯದ ವಿಷಯಗಳ ಕುರಿತು ತರಬೇತಿಯಲ್ಲಿ ಮಾಹಿತಿ ಪಡೆದು ಮತ ಏಣಿಕೆ ಕಾರ್ಯ ಸುಗಮವಾಗಿ ಹಾಗೂ ಸುಸೂತ್ರವಾಗಿ ನಡೆಸಲು ಸನ್ನದ್ದವಾಗಿವಂತೆ ಸೂಚಿಸಿದರು. ಅಂದು ಮತ ಏಣಿಕೆ ಕೇಂದ್ರಕ್ಕೆ ಬೇಗನೇ ಆಗಮಿಸಬೇಕು ಕಡ್ಡಾಯವಾಗಿ ಗುರುತಿನ ಚೀಟಿ ತರಲು ತಿಳಿಸಿದರು.
ಮತ ಏಣಿಕೆ ನಿಯೋಜಿತ ಅಽಕಾರಿ, ಸಿಬ್ಬಂದಿ ಮತಗೆ ವಹಿಸಿದ ಜವಾಬ್ದಾರಿಗಳನ್ನು ಅರಿತುಗೊಳ್ಳಲು ಈ ತರಬೇತಿ ಮುಖ್ಯವಾಗಿದೆ. ಇಲ್ಲಿನ ವಿಷಯಗಳನ್ನು ತಿಳಿದುಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಮೈಕ್ರೋ ಆಬ್ಸರವರ ಅವರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಮಾತನಾಡಿ, ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದೆ. ವಿಷಯ ಮನದಟ್ಟು ಮಾಡಿಕೊಂಡು ಶಿಸ್ತುಬದ್ಧವಾಗಿ ಸಂಯಮದಿಂದ ಕಾರ್ಯನಿರ್ವಹಿಸಲು ತಿಳಿಸಿದರು. ತರಬೇತುದಾರ ಬಿ.ಕೆ.ತೋಟದ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಸಹಾಯಕ ಚುನಾವಣಾಽಕಾರಿಗಳಾದ ಹುಲ್ಲುಮನಿ ತಿಮ್ಮಣ್ಣ, ಸಾಜಿದ ಅಹಮ್ಮದ ಮುಲ್ಲಾ, ಸಂತೋಷ ಕಾಮಗೌಡ, ಎಂ.ಬಿ.ನಾಗಠಾಣ, ದುರುಗೇಶ ರುದ್ರಾಕ್ಷಿ, ಸಂತೋಷ ಜಗಲಾಸರ, ಶ್ರೀಧರ ಗೋಟೂರ, ಡಾ.ಹಂಪಣ್ಣ ಉಪಸ್ಥಿತರಿದ್ದರು.