ಜಿಲ್ಲೆ

ಸುಖ, ದುಃಖ ಸಮನಾಗಿ ಸ್ವೀಕರಿಸಿ

ಚಿತ್ರದುರ್ಗ: ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿ ಒಂದೇ ಇರುವಂತೆ ಬದುಕಿನಲ್ಲಿನ ಸುಖ,ದುಃಖಗಳನ್ನು ಸತಿಪತಿ ಸಮಾನವಾಗಿ ಸ್ವೀಕರಿಸಬೇಕೆಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಮುರುಘಾ ಮಠದಲ್ಲಿ ಶನಿವಾರ ಏರ್ಪಡಿಸಿದ್ದ 34 ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ಸಾನ್ನಿಧ್ಯ ವಹಿಸಿ ಮಾತನಾಡಿ, ಹಸನಾದ ಬದುಕನ್ನು ಕಟ್ಟಿಕೊಳ್ಳುವಂತೆ ನವ ದಂಪತಿಗೆ ಸಲಹೆ ನೀಡಿದರು.
ಮೈಸೂರು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಾದೇವಪ್ಪ ಮಾತನಾಡಿ, ಸಾಮೂಹಿಕ ಕಲ್ಯಾಣ ಮಹೋತ್ಸವದ ಉದ್ದೇಶವೇ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು. ಆಡಂಬರಕ್ಕಿಂತ ಆದರ್ಶ ಮುಖ್ಯವೆಂದರು.
ಡಾ. ಬಸವಕುಮಾರ ಶ್ರೀ, ಬಸವನಾಗೀದೇವ ಶ್ರೀ, ಸಿದ್ಧಬಸವ ಕಬೀರ ಶ್ರೀ, ಭರಮಸಾಗರದ ಟಿ.ಆರ್. ಚನ್ನೇಶ್, ಎನ್.ಟಿ. ಬಸಣ್ಣ, ಹಾವೇರಿ ಬಸವಕೇಂದ್ರದ ಶೋಭಾತಾಯಿ ಮಾಗಾವಿ ಇದ್ದರು.
ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಜಿ. ಸಿದ್ದಲಿಂಗ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕಲ್ಯಾಣ ಮಹೋತ್ಸವದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.