ಬಸವಕಲ್ಯಾಣ: ಸಮಾಜದಲ್ಲಿ ಸರಳ ಹಾಗೂ ಸುಂದರ ಬದುಕು ನಡೆಸಬೇಕಾದರೆ ಗುರುವಿನ ಆಶೀರ್ವಾದ ಮತ್ತು ಮಾರ್ಗದರ್ಶನ ಅಗತ್ಯ ಎಂದು ಅಷ್ಟಗಿ ಲೋಹಾರದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.
ಹಿರೇನಾಗಾಂವದ ಶ್ರೀ ಭವಾನಿ ಮಂದಿರದಲ್ಲಿ ದಸರಾ ಮಹೋತ್ಸವ ನಿಮಿತ್ತ ಸಂಸ್ಥಾನ ಹಿರೇಮಠದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಪುರಾಣ, ಪ್ರವಚನದ ಸಮಾರೋಪದಲ್ಲಿ ಮಾತನಾಡಿ, ಜೀವನದಲ್ಲಿ ಹೊನ್ನು, ಹಣ್ಣು ಮತ್ತು ಮಣ್ಣಿನ ಬಗ್ಗೆ ತಿಳಿದವರು ಸರಳ ಜೀವನ ನಡೆಸುತ್ತಾರೆ. ಉತ್ತಮ ಸಂಸ್ಕಾರದಿAದ ಸಮಾಜದಲ್ಲಿ ನಡೆಯುತ್ತಾರೆ ಎಂದು ಹೇಳಿದರು.
ಹಿರೇನಾಗಾಂವದ ಶ್ರೀ ಜಯಶಾಂತಲಿAಗ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷ ನವರಾತ್ರಿಯಲ್ಲಿ ಪುರಾಣ, ಪ್ರವಚನ ಹಮ್ಮಿಕೊಳ್ಳುತ್ತಿರುವುದರಿಂದ ಭಕ್ತರ ನೆಮ್ಮದಿಗೆ ಪ್ರೇರಣೆ ದೊರೆಯಲಿದೆ. ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವೆಯಿಂದ ದುಡಿಯುವ ಎಲ್ಲರಿಗೂ ದೇವರ ಕೃಪೆ ಇರಲಿದೆ. ಸಮಾಜದಲ್ಲಿ ಎಲ್ಲರೂ ಪರಿವರ್ತನೆಯಾಗಬೇಕು. ಕಲುಷಿತ ಮನಸ್ಸುಗಳನ್ನು ಶುಚಿಗೊಳಿಸಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಭರಮಶೆಟ್ಟಿ ತಡಕಲ್, ಕಾರ್ತಿಕಯ್ಯ ಸ್ವಾಮಿ ರಾಜೋಳಾ ಸಂಗೀತಕ್ಕೆ ವಿಶ್ವನಾಥ ಸ್ವಾಮಿ ಐನೊಳ್ಳಿ ತಬಲಾ ಸಾಥ್ ನೀಡಿದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ, ಕಾರ್ಯದರ್ಶಿ ಸುರೇಶ ಮಾಳಿ, ಖಜಾಂಚಿ ಕಲ್ಯಾಣಿ ಗಿರಿಮನಿ, ಸಂಚಾಲಕ ನಾಗಣ್ಣ ಕಮಾಟೆ, ಪ್ರಮುಖರಾದ ನಾಗಣ್ಣ ಬಿರಾದಾರ, ಚನ್ನಪ್ಪ ಅಳ್ಳಿ, ಜಗನ್ನಾಥ ಗದ್ಲೆಗಾಂವ, ಸಿದ್ದಣ್ಣ ಬಾಬನೋರ, ನಾಗಶೆಟ್ಟಿ ಪಟ್ಟೇದಾರ ಇತರರಿದ್ದರು.