?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸುಂದರ ದುರ್ಗ ನಿರ್ಮಾಣಕ್ಕೆ ಬೇಕು ಸಹಕಾರ

ಚಿತ್ರದುರ್ಗ: ನಗರದ ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದು ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಹೇಳಿದರು.
ನಗರಸಭೆಯಲ್ಲಿ ಶನಿವಾರ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಜತೆ ಸಾರ್ವಜನಿಕರು ಸ್ವ ಇಚ್ಛೆಯಿಂದ ಸ್ವಚ್ಛತೆಗೆ ಕೈಜೋಡಿಸಿದರೆ ಈ ಅಭಿಯಾನ ಯಶಸ್ಸು ಜತೆಗೆ ಆರೋಗ್ಯ ಭಾಗ್ಯ ಲಭಿಸಲಿದೆ ಎಂದರು.
ಸ್ವಚ್ಛತೆ ಜಾಗೃತಿ ಮೂಡಿಸಲು ಸೆ.14 ರಿಂದ ಅಕ್ಟೋಬರ್ 2 ರ ವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನ ಆಯೋಜಿಸಲಾಗಿದೆ. ಶಾಲಾ-ಕಾಲೇಜು, ದೇವಾಲಯ, ಆಸ್ಪತ್ರೆ, ಉದ್ಯಾನಗಳಲ್ಲಿ ವಿವಿಧ ಬಗೆಯ ಕಾರ‌್ಯಕ್ರಮಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಮಹತ್ವದೆಡೆ ಅರಿವು ಮೂಡಿಸಲಾಗುವುದು. ನಾವೆಲ್ಲರೂ ಸೇರಿ ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಶ್ರಮಿಸಬೇಕೆಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್ ಮಾತನಾಡಿ, ಸ್ವಚ್ಛತೆ ಎಂಬುದು ಮನೆಗಳೊಂದಿಗೆ ನಮ್ಮ ಪರಿಸರವೂ ಸ್ವಚ್ಛತೆಯಿಂದ ಕೂಡಿರಬೇಕಿದೆ. ವಾತಾವರಣದಲ್ಲಿ ಪ್ಲಾಸ್ಟಿಕ್ ಹೇರಳವಾಗಿ ಬೆರೆತಿರುವುದು ಕ್ಯಾನ್ಸರ್, ಹೃದಯಾಘಾತ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕು. ಹಸಿಕಸ-ಒಣಕಸ ವಿಂಗಡಿಸಿ ನಗರಸಭೆ ವಾಹನಗಳಿಗೆ ಕೊಡುವ ಮೂಲಕ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಪೌರಾಯುಕ್ತೆ ಎಂ.ರೇಣುಕಾ ಪ್ರತಿಜ್ಞಾವಿಧಿ ಬೋಧಿಸಿದರು. ನಗರಸಭೆಯಲ್ಲಿ ಸ್ಥಾಪಿಸಿದ್ದ ಸ್ವಚ್ಛತಾ ಸೆಲ್ಫಿ ಪಾಯಿಂಟ್‌ಗಳಲ್ಲಿ ಸುಮಿತಾ ರಾಘವೇಂದ್ರ, ಮಹೇಂದ್ರ ಕುಮಾರ್, ರೇಣುಕಾ, ಸದಸ್ಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಸದಸ್ಯರಾದ ಸೈಯದ್ ನಸರುಲ್ಲಾ, ಜಯಪ್ಪ, ಕಂದಾಯಾಧಿಕಾರಿ ಪ್ರಕಾಶ್, ಜೆ.ಇ.ಮುನಿಸ್ವಾಮಿ, ಪರಿಸರ ಇಂಜಿನಿಯರ್ ಎ.ಜಾಫರ್, ಲೆಕ್ಕಾಧೀಕ್ಷಕ ಮೆಹಬೂಬ್ ಅಲಿ, ಆರೋಗ್ಯ ನಿರೀಕ್ಷಕರಾದ ರುಕ್ಮಿಣಿ, ಹೀನಾಕೌಸರ್, ಭಾರತಿ ಇತರರಿದ್ದರು.

*ಕೋಟ್
ಗಾಂಧೀಜಿ ಕನಸಿನಂತೆ ಸ್ವಚ್ಛ ಭಾರತ ಯೋಜನೆಯಡಿ ಶೌಚಗೃಹ ನಿರ್ಮಾಣ, ಸ್ವಚ್ಛತಾ ಕಾರ‌್ಯದ ಮೂಲಕ ಉತ್ತಮ ವಾತಾವರಣ ನಿರ್ಮಿಸಲಾಗುತ್ತಿದೆ. 15 ದಿನಗಳ ಕಾಲ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ, ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.
.ಎಂ.ರೇಣುಕಾ, ಆಯುಕ್ತರು, ನಗರಸಭೆ, ಚಿತ್ರದುರ್ಗ