ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಟ್ಟಡ. 
ಜಿಲ್ಲೆ

ಸುಂಟಿಕೊಪ್ಪ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸಾನಕ್ಕೆ ಚುನಾವಣೆ ಇಂದು

ಸುಂಟಿಕೊಪ್ಪ: ಇಲ್ಲಿನ ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ.10ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನವು ಬಿಸಿಎಂ(ಎ) ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮಿಸಲಾಗಿದೆ.

ಆ.3ರಂದು ಚುನಾವಣೆ ನಡೆಯಬೇಕಿತ್ತು. ಆದರೆ ನಾಮಪತ್ರ ಸಲ್ಲಿಕೆ ಹಂತದಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಕ್ರಮಬದ್ಧವಾಗಿಲ್ಲ ಎಂದು 7 ಸದಸ್ಯರು ಸಲ್ಲಿಸಿದ್ದ ನಾಮಪತ್ರಗಳನ್ನು ಚುನಾವಣಾಧಿಕಾರಿ ತಿರಸ್ಕರಿಸಿ ಆ.10ಕ್ಕೆ ಚುನಾವಣೆಯನ್ನು ಮುಂದೂಡಿದ್ದರು.

ಈ ಗ್ರಾಮ ಪಂಚಾಯಿತಿಯು ಗ್ರೇಡ್1 ಪಂಚಾಯಿತಿಯಾಗಿದ್ದು, ಜಿಲ್ಲೆಯ ದೊಡ್ಡ ಪಂಚಾಯಿತಿಗಳಲ್ಲಿ 3ನೇ ಸ್ಥಾನದಲ್ಲಿದೆ. ಒಟ್ಟು 20 ಸದಸ್ಯ ಬಲದ ಪಂಚಾಯಿತಿಯಲ್ಲಿ 11 ಜನ ಸದಸ್ಯರು ಅಧ್ಯಕ್ಷರಾಗಲು ಮೀಸಲಾತಿಯಡಿ ಅವಕಾಶ ಪಡೆದಿದ್ದು, ಉಪಾಧ್ಯಕ್ಷರಾಗಲು ಮೂವರು ಮಹಿಳೆಯರು ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮತ್ತು ಎಸ್‌ಡಿಪಿಐನಿಂದ ತಲಾ ನಾಲ್ವರು ಸದಸ್ಯರಿದ್ದು, ಉಳಿದ 8 ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದಾರೆ.
ಚಿತ್ರ.1: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಟ್ಟಡ