ಜಿಲ್ಲೆ

ಸೀಲ್​ಡೌನ್ ಪ್ರದೇಶ ಲೆಕ್ಕಕ್ಕಿಲ್ಲ

Dharwad

ಹುಬ್ಬಳ್ಳಿ: ಇಲ್ಲಿನ ಶಾಂತಿನಗರ, ಆಜಾದ್ ಕಾಲನಿ ಹಾಗೂ ನವ ಅಯೋಧ್ಯಾನಗರದಲ್ಲಿಯ ಕರೊನಾ ಸೀಲ್​ಡೌನ್ ಪ್ರದೇಶದಲ್ಲಿ ಬುಧವಾರ ಸಹ ಸಾರ್ವಜನಿಕರ ಓಡಾಟಕ್ಕೆ ಕಡಿವಾಣ ಬಿದ್ದಿದ್ದು ಕಂಡುಬರಲಿಲ್ಲ.

ಬಸ್, ಆಟೋ ಸೇರಿ ಇತರ ವಾಹನಗಳ ಓಡಾಟ ಜೋರಾಗಿದೆ. ಕೆಲವರು ತಮ್ಮ ವಾಹನಗಳ ಓಡಾಟಕ್ಕೆ ಅಡ್ಡ ದಾರಿಗಳನ್ನು ಕಂಡುಕೊಂಡಿದ್ದಾರೆ. ತಮ್ಮ ಮನೆ ಅಥವಾ ಇತರೆಡೆ ತೆರಳಲು ಹಾಕಿರುವ ಬ್ಯಾರಿಕೇಡ್ ದಾಟುತ್ತಿದ್ದಾರೆ. ತರಕಾರಿ, ದಿನಸಿ ವಸ್ತುಗಳು ಸೀಲ್​ಡೌನ್ ಪ್ರದೇಶದಲ್ಲಿ ಲಭ್ಯವಾಗುವಂತೆ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ. ಆದರೂ ಕೆಲವರು ಹೊರಗಡೆ ಹೋಗಿ ತರಕಾರಿ ತರುವುದನ್ನು ರೂಢಿಸಿಕೊಂಡಿದ್ದಾರೆ. ಸುಖಾಸುಮ್ಮನೆ ಓಡಾಡಿ ಪೊಲೀಸರನ್ನೂ ಹೈರಾಣ ಮಾಡುತ್ತಿರುವುದು ಆಜಾದ್ ಕಾಲನಿಯಲ್ಲಿ ಕಂಡು ಬರುತ್ತಿದೆ.

ಶಾಂತಿನಗರದಲ್ಲಿ ಮೊದಲು ಸೋಂಕಿತ ವ್ಯಕ್ತಿ ಪತ್ತೆಯಾದ ವೇಳೆ ಜನರು ಅಷ್ಟೊಂದು ಹೆದರಿರಲಿಲ್ಲ. ಆದರೆ, ಮತ್ತೊಂದು ಪ್ರಕರಣ ಇಲ್ಲಿ ಕಂಡು ಬಂದಿದ್ದರಿಂದ ಭಯ ಶುರುವಾಗಿದೆ. ಮನೆಬಿಟ್ಟು ಜನರು ಹೊರಗಡೆ ಬಾರದೇ ಎಚ್ಚರ ವಹಿಸಿದ್ದು, ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ.

ನವ ಅಯೋಧ್ಯಾನಗರದಲ್ಲಿ ಜನರು ಅಲ್ಲಲ್ಲಿ ಕಂಡುಬರುತ್ತಿದ್ದರೂ ಭಯದ ವಾತಾವರಣ ಇದೆ. ಪೌರ ಕಾರ್ವಿುಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಜನರ ಮನೆ ಬಾಗಿಲಿಗೆ ತರಕಾರಿ ಹಾಗೂ ದಿನಸಿ ಕಳುಹಿಸಿಕೊಡಲಾಗುತ್ತಿದೆ. ಅಗತ್ಯ ವಸ್ತು ಬೇಕೆಂದಲ್ಲಿ ಮಹಾನಗರ ಪಾಲಿಕೆಯ ಕಂಟ್ರೋಲ್ ರೂಂಗೆ ಕರೆ ಮಾಡುವಂತೆ ಪಾಲಿಕೆ ಸಿಬ್ಬಂದಿ ಜನರಿಗೆ ತಿಳಿ ಹೇಳುತ್ತಿದ್ದಾರೆ.

571 ಶಂಕಿತರು ಪತ್ತೆ

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 571 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಂಗಳವಾರ ಇದ್ದ 10,621 ನಿಗಾವಹಿಸಿದವರ ಸಂಖ್ಯೆ ಬುಧವಾರ 11,194ಕ್ಕೆ ಏರಿಕೆಯಾಗಿದೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 10,522 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 8,899 ಜನರ ವರದಿ ನೆಗೆಟಿವ್ ಬಂದಿವೆ. 26 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 17 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 1,606 ವರದಿಗಳು ಬರಬೇಕಿದೆ. ಮಂಗಳವಾರ ಬಾಕಿ ಇದ್ದ 1,770 ವರದಿಗಳ ಪೈಕಿ 164 ವರದಿಗಳು ನೆಗೆಟಿವ್ ಬಂದಿವೆ.

ಸಹಾಯವಾಣಿ ಸ್ಥಾಪನೆ

ಧಾರವಾಡ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೋವಿಡ್-19 ಅವಧಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಸಹಾಯವಾಣಿ ಸ್ಥಾಪಿಸಿದೆ. ಬಾಲ್ಯ ವಿವಾಹ, ಬಾಲ ಕಾರ್ವಿುಕ, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ, ಮಕ್ಕಳ ಸಾಗಾಟ-ಮಾರಾಟ, ಮಕ್ಕಳು ಕಾಣೆಯಾಗಿರುವುದು ಮತ್ತು ಶಾಲೆಗಳಿಗೆ ಸಂಬಂಧಿಸಿದ ದೂರುಗಳಿಗೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಹಾಯವಾಣಿ ಸಂಖ್ಯೆ 080-47181177ಗೆ ಸಂರ್ಪಸಿ ದೂರು ದಾಖಲಿಸಬಹುದು ಎಂದು ಆಯೋಗದ ಸದಸ್ಯ ಅಶೋಕ ಯರಗಟ್ಟಿ ತಿಳಿಸಿದ್ದಾರೆ.