ಮೈಸೂರು: ರೋಟರಿ ಮೈಸೂರು ಪೂರ್ವದ ವತಿಯಿಂದ ಮಹಿಳೆಯರಿಗೆ ಸೀರೆಯುಟ್ಟು ನಡಿಗೆ ಕಾರ್ಯಕ್ರಮವನ್ನು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅ.30ರಂದು ಬೆಳಗ್ಗೆ 7 ಗಂಟೆಗೆ ಆಯೋಜಿಸಲಾಗಿದೆ.
ಸೀರೆಯುಟ್ಟ ಮಹಿಳೆಯರು ಅರಮನೆಯ ಒಂದು ಸುತ್ತು ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ವಾಕಥಾನ್‌ಗೆ ಚಾಲನೆ ನೀಡುವರು. ರೋಟರಿಯ ಎಲಿಜಬೆತ್ ಶಕುಂತಲಾ ಹಾಗೂ ಭಾನು ಆನಂದ್ ನೇತೃತ್ವ ವಹಿಸುವರು. ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮ ಸಹ ನಡೆಯಲಿದೆ.
ಸ್ತನ ಕ್ಯಾನ್ಸರ್ ತಪಾಸಣೆ, ಕ್ಯಾನ್ಸರ್ ಪೀಡಿತರಿಗೆ ವಿಗ್ ತಯಾರಿಸಲು ಅರಮನೆ ಉತ್ತರ ದ್ವಾರದ ಬಳಿ ಕೇಶದಾನ ಶಿಬಿರ ಜರುಗಲಿದೆ ಎಂದು ವಿ-ಸಖಿ ಸಂಸ್ಥಾಪಕಿ ರಾಜಲಕ್ಷ್ಮೀ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.