ಜಿಲ್ಲೆ

ಸೀಬರ್ಡ್ ನೌಕಾ ಯೋಜನೆಯ 16 ಉದ್ಯೋಗಿಗಳಿಗೆ ಸೋಂಕು

ಕಾರವಾರ: ಜಿಲ್ಲೆಯ 57 ಜನರಿಗೆ ಮಂಗಳವಾರ ಕೋವಿಡ್ ಕಾಣಿಸಿಕೊಂಡಿದೆ. ಕಾರವಾರದ 21, ಭಟ್ಕಳ ಮತ್ತು ಯಲ್ಲಾಪುರದ 4, ಮುಂಡಗೋಡಿನ 10, ಹಳಿಯಾಳದ 9, ಶಿರಸಿಯ 5, ಜೊಯಿಡಾದ 1, ಕುಮಟಾದ 3 ಜನಕ್ಕೆ ಸೋಂಕು ಇರುವುದು ಖಚಿತವಾಗಿದೆ. ಶಿರಸಿಯಲ್ಲಿ 1 ಸಾವು ಸಂಭವಿಸಿದೆ. ಯಾರೂ ಬಿಡುಗಡೆಯಾಗಿಲ್ಲ.

ಕಾರವಾರದಲ್ಲಿ ಸೀಬರ್ಡ್ ನೌಕಾ ಯೋಜನೆಯ 16 ಉದ್ಯೋಗಿಗಳಿಗೆ ಸೋಂಕು ಕಾಣಿಸಿದೆ. ನಗರದ ಮೂವರಿಗೆ ಕದ್ರಾ ಹಾಗೂ ಬಾಳ್ನಿಯ ತಲಾ ಒಬ್ಬರಲ್ಲಿ ಕರೊನಾ ಇರುವುದು ಖಚಿತವಾಗಿದೆ.

ಐವರ ಸೋಂಕಿನ ಮೂಲ ಪತ್ತೆಯಾಗಿಲ್ಲ. 9 ಜನರಿಗೆ ಜ್ವರದ ಲಕ್ಷಣ (ಐಎಲ್​ಐ) ಇತ್ತು ಇನ್ನು ಹೊರ ಊರುಗಳಿಂದ ಬಂದ 7 ಜನರಲ್ಲೂ ವೈರಸ್ ಕಂಡುಬಂದಿದೆ. ಒಟ್ಟಾರೆ ಸೋಂಕಿತರಲ್ಲಿ 11 ವೃದ್ಧರು ಇಬ್ಬರು ಮಕ್ಕಳಿದ್ದಾರೆ.