ಜಿಲ್ಲೆ

ಸೀತನಿ ಸುಗ್ಗಿಯಲ್ಲಿ ಸಂಭ್ರಮಿಸಿದ ಜನತೆ

ಕಲಬುರಗಿ: ಒಂದು ಕಾಲದಲ್ಲಿ ಹೊಲದಲ್ಲಿ ಸೀತನಿ ತಿನ್ನುವುದು ಎಂದರೆ ಎಲ್ಲಿಲ್ಲದ ಸಂಭ್ರಮ. ಕುಟುಂಬದವರೆಲ್ಲರೂ ಸೇರಿ ಹೊಲಗಳಿಗೆ ತೆರಳು ಸೀತನಿ (ಜೋಳದ ಎಳೆ ತೆನೆ) ಸುಟ್ಟು ತಿನ್ನುವ ವೈಭವ ಇತ್ತೀಚೆಗೆ ಮರೆಯಾಗಿತ್ತು.
ನಗರದ ಗೋದುತಾಯಿ ಕಾಲನಿ ಅಪ್ಪ ಅವರ ತೋಟದಲ್ಲಿ ಸೀತನಿ ಸುಗ್ಗಿ ಆಯೋಜಿಸುವ ಮೂಲಕ ಲಿಂಗರಾಜ ಅಪ್ಪ ಅವರು ಮರೆಯಾಗುತ್ತಿರುವ ಪದ್ಧತಿಗೆ ಮರು ಜೀವ ತುಂಬಿದರು.
ತೋಟದಲ್ಲಿ ಮಂಗಳವಾರ ಸೀತನಿ ಸುಗ್ಗಿ ಆಯೋಜಿಸುವ ಮೂಲಕ ಹಳ್ಳಿಯ ಸೊಗಡು ಮರುಕಳಿಸಿದರು .ನಗರದ ಪ್ರಮುಖರು, ಆಪ್ತ ವಲಯದವರು ಸೀತನಿ ತಿಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸೀತನಿ ಜತೆ ಶೆಂಗಾ ಚಟ್ನಿ, ಹುಣಸೆ ಚಟ್ನಿ (ಹುಣಸೆ ತೊಕ್ಕು) ಸೇವಿಸುವುದೇ ಒಂದು ಸುಂದರ ಅನುಭವದಂತಿತ್ತು. ಬಹಳ ದಿನವಾಗಿತ್ತು ತಿಂದು ಎನ್ನುತ್ತ ಹಳೆಯ ಸಂಪ್ರದಾಯ ಮೆಲಕು ಹಾಕಿದರು.
ಎಲ್ಲರೂ ಬಾಲ್ಯದ ನೆನಪು ಮೆಲಕು ಹಾಕುತ್ತ ನಾವು ಸಣ್ಣವರಿದ್ದಾಗ ನಮ್ಮ ಹೊಲದಲ್ಲಿ ತಿನ್ನುತ್ತಿದ್ದೇವು. ಸೀತನಿ ಸುಗ್ಗಿ ಆಯೋಜಿಸುವ ಮೂಲಕ ಲಿಂಗರಾಜಪ್ಪ ಅಪ್ಪ ಅವರು ಕಣ್ಮರೆ ಆಗುತ್ತಿದ್ದ ಪದ್ಧತಿಗೆ ಮರು ಜೀವ ತುಂಬಿದ್ದಾರೆ ಎಂದು ಬಣ್ಣಿಸಿದರು.
ವಿಶ್ವ ಹಿಂದೂ ಪರಿಷತ್ನ ಪ್ರಮುಖ ಲಿಂಗರಾಜ ಅಪ್ಪ, ಪ್ರಭು ರಾಜ ಅಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದಶರ್ಿ ಡಾ.ಶರಣ ಪಾಟೀಲ್, ಯುವ ಘಟಕ ಗೌರವ ಅಧ್ಯಕ್ಷ ಎಂ. ಎಎಸ್. ಪಾಟೀಲ್ ನರಿಬೋಳ, ಕೃಷ್ಣ ಜೋಶಿ, ಸೋಮಶೇಖರ ಹಿರೇಮಠ, ರವೀಂದ್ರ ಮುತ್ತಿನ, ತಾತಾ ಗೌಡ ಪಾಟೀಲ್, ಅಶ್ವಿನಕುಮಾರ್ ಸಿದ್ದರಾಜ್, ಮಾಜಿ ಸೈನಿಕ ಮಲ್ಲಿಕಾಜರ್ುನ ಮಡಿವಾಳ, ಡಾ.ರಾಜಶೇಖರ ಬಂಡೆ, ಮಂಜುನಾಥ ಅಂಕಲಗಿ, ಸಾಗರ ರಾಥೋಡ, ಪೂಜಾ ಮಠಪತಿ, ಗೌರಿ ಚಿತ್ರಕೋಟ, ಅನ್ನಪೂರ್ಣ ಹಿರೇಮಠ, ಮಾಲಾ ಎಸ್.ಐ, ಮಾಲಾ ಕಣ್ಣಿ , ಗಿರೀಶಗೌಡ, ವಿಜಯಕುಮಾರ ಪಾಲ್ಗೊಂಡಿದ್ದರು.

ನಮ್ಮ ನಾಡಿನ ಸನಾತನ ಪದ್ಧತಿ ಕಣ್ಮರೆಯಾಗುತ್ತಿದ್ದು, ಇಂದಿನ ಯುವ ಪಿಳೀಗೆಗೆ ಸೀತನಿ ಸವಿ ತಿಳಿಸಿಕೊಡುವ ಉದ್ದೇಶದಿಂದ ನಾಲ್ಕು ದಿನ ಅಪ್ಪ ಅವರ ತೋಟದಲ್ಲಿ ಆಯೋಜಿಸಲಾಗಿದೆ. ನಮ್ಮ ಭವ್ಯ ಪರಂಪರೆ ಮರುಕಳಿಸಬೇಕಿದೆ. ಹಳ್ಳಿ ಸೊಗಡಿಗೆ ಜೀವ ತುಂಬುವ ಅಗತ್ಯವಿದೆ.
| ಲಿಂಗರಾಜಪ್ಪ ಅಪ್ಪ, ವಿಶ್ವ ವಿಂದೂ ಪರಿಷತ್ನ ಮುಖಂಡ