ಬಾಗಲಕೋಟೆ: ಕೆರೂರು ಪೊಲೀಸ್ ಠಾಣೆಯಲ್ಲಿ ಬೆಳ್ಳಿಕಿಂಡಿಯ ಗ್ರಾಪಂ ಸದಸ್ಯ ಭೀಮಪ್ಪ ಮೇಟಿ ಅವರ ಮೇಲೆ ಪಿಎಸ್‌ಐ ಭೀಮಪ್ಪ ರಬಕವಿ ಹ¯್ಲÉ ನಡೆಸಿಲ್ಲ ಎನ್ನುವದಾದರೇ ಠಾಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಲಿ ಎಂದು ಆಲï ಇಂಡಿಯಾ ಬಿಎಸ್‌ಪಿ ಮುಖಂಡ ವೈ.ಸಿ.ಕಾಂಬಳೆ ಸವಾಲು ಹಾಕಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಪ್ಪ ಮೇಟಿ ಅವರ ಮೇಲಿನ ಹ¯್ಲÉಯನ್ನು ಖಂಡಿಸಿದ ನನ್ನ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡಲಾಗುತ್ತದೆ. ಸಾಮಾಜಿಕ ಜೀವನದಲ್ಲಿದ್ದುಕೊಂಡು ಈವರೆಗೆ ನನ್ನ ಮೇಲೆ ಹೋರಾಟಕ್ಕೆ ಸಂಬAಽಸಿದ ಪ್ರಕರಣಗಳಷ್ಟೇ ದಾಖಲಾಗಿವೆ. ನನ್ನ ತೇಜೊವಧೆಗೆ ಮುಂದಾದರೆ ಮಾನನಷ್ಟ ಮೊಕದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಹ¯್ಲÉಗೊಳಗಾದ ಭೀಮಪ್ಪ ಮೇಟಿ ಮಾತನಾಡಿ, ನನ್ನ ಮೇಲೆ ಪೊಲೀಸರೇ ಹ¯್ಲÉ ಮಾಡಿz್ದÁರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೋರಿಕೊಂಡರೂ ಠಾಣೆಯ¯್ಲÉÃ ಕೂರಿಸಿದ್ದರು. ವೈ.ಸಿ.ಕಾಂಬಳೆ ಅವರು ನನ್ನ ಪರವಾಗಿ ಧ್ವನಿ ಎತ್ತಿದ ನಂತರ ಊರಿಗೆ ಬಿಟ್ಟು ಹೋಗಿz್ದÁರೆ ಎಂದರು.
ಮುಖಂಡರಾದ ಮಂಜುನಾಥ ನಡುವಿನಮನಿ, ಹಣಮಂತ ಚೂರಿ, ಶಂಕರ ಚಂದಾವರಿ, ನಾಗೇಶ ಚಂದಾವರಿ ಇತರರು ಇದ್ದರು.