ಸಿಂದಗಿ ತಾಲೂಕು ಬ್ರಹ್ಮದೇವನಮಡು ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ರವಿರಾಜ ದೇವರಮನಿ, ರುದ್ರಣ್ಣಸಾಹು ಮಾನಶೆಟ್ಟಿ, ಬಸವರಾಜ ಮಾರಲಭಾವಿ, ಹಣಮಂತ್ರಾಯಗೌಡ ಬಿರಾದಾರ ಇದ್ದರು. 
ಜಿಲ್ಲೆ

ಸಿಸಿ ರಸ್ತೆಗೆ 50ಲಕ್ಷ ರೂ. ಅನುದಾನ

ಬ್ರಹ್ಮದೇವನಮಡು: ಗ್ರಾಮದಲ್ಲಿ ಉತ್ತಮ ಸಿಸಿ ರಸ್ತೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು 50 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಗ್ರಾಮದ ಮಸೀದಿಯಲ್ಲಿ ಸೋಮವಾರ ಸಂಜೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮತದಾರರು, ನನ್ನ ಮೇಲೆ ನಂಬಿಕೆಯಿಟ್ಟು ಮತ ನೀಡಿದ್ದಾರೆ. ಅವರ ಬಯಕೆಯಂತೆ ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಎಲ್ಲ ಕಾರ್ಯಕರ್ತರ ಶ್ರಮದಿಂದ ನನ್ನ ಗೆಲುವಾಗಿದೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನನ್ನ ಗುರಿಯಾಗಿದೆ. ದಿ. ಎಂ.ಸಿ. ಮನಗೂಳಿ ಅವರು ಶಾಸಕರಾಗಿದ್ದಾಗ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿ ಜನಮಾನಸದಲ್ಲಿ ಉಳಿದಿದ್ದಾರೆ. ನಾನು ನಮ್ಮ ತಂದೆಯಂತೆ ಜನತೆಯ ಸೇವೆ ಮಾಡಲು ಸಿದ್ದನಾಗಿರುವೆ ಎಂದರು.

ಕಾಂಗ್ರೆಸ್ ಯುವ ಮುಖಂಡ ರವಿರಾಜ ದೇವರಮನಿ, ವಿಜುಗೌಡ ಬಿರಾದಾರ, ರುದ್ರಣ್ಣಸಾಹು ಮಾನಶೆಟ್ಟಿ, ಹಣಮಂತ್ರಾಯಗೌಡ ಬಿರಾದಾರ, ಬಸವರಾಜ ಮಾರಲಭಾವಿ, ಯಂಕನಗೌಡ ಪಾಟೀಲ, ಬಿ.ವೈ. ಅಮರಗೋಳ, ಮಹೇಶ ಮನಗೂಳಿ, ಶರಣಗೌಡ ಪಾಟೀಲ, ನಿಂಗನಗೌಡ ಪಾಟೀಲ, ರಾಜೇಸಾಬ ಸೀತನೂರ, ಬಸನಗೌಡ ಉಳ್ಳೆಸೂರ, ದವಲಸಾಬ ಸೀತನೂರ, ದೇವಿಂದ್ರ ತೊನಶ್ಯಾಳ, ಸಾಹೇಬಪಟೇಲ ಮುರಡಿ, ಡಿ.ಕೆ. ಸೀತನೂರ, ಎಚ್.ಕೆ. ಸೀತನೂರ, ಬಂದೇನಮಾಜ ಸೀತನೂರ, ಅಲ್ಲಾಪಟೇಲ ಸೀತನೂರ, ಸುರೇಶ ಕೆಂಭಾವಿ, ಅಂಬ್ರುತ್ ದೊಡ್ಡಮನಿ ಇತರರಿದ್ದರು.