ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನಲೆ ನಗರದ ಹೊರವಲಯದ ಹಲಕುಂದಿ ಬಳಿ ಸ್ಥಾಪಿಸಲಾಗಿದ್ದ ಚೆಕ್ ಪೋಸ್ಟ್ ಸಿಸಿ ಕ್ಯಾಮೆರಾ ಕದ್ದ ಆರೋಪದ ಮೇಲೆ ಅಬಕಾರಿ ಕಾನಸ್ಟೇಬಲ್ ವಿರುದ್ದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲಕುಂದಿ ಚೆಕ್‌ಪೋಸ್ಟ್‌ನ ಸಿಸಿ ಕ್ಯಾಮೆರಾಗಳು ಕಳುವಾಗಿರುವುದಾಗಿ ಮೇ 21ರಂದು ಪ್ರವೀಣ್ ಮಾಹಿತಿ ಬಂದಿತ್ತು. ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮೇ 10ರಂದು ಬೆಳಗ್ಗೆ ಅಬಕಾರಿ ಕಾನ್ಸ್‌ಟೇಬಲ್ ಮಸ್ತಾನ್ ವಲಿ ಕ್ಯಾಮೆರಾ ಗಳನ್ನು ಬಿಚ್ಚಿಕೊಂಡು ಹೋಗಿರುವುದು ಗೊತ್ತಾಗಿದೆ. ಸಿಸಿ ಕ್ಯಾಮೆರಾಗಳನ್ನು ತಂದು ಒಪ್ಪಿಸುವಂತೆ ಹೇಳಿದರೆ ತಾನು ತೆಗೆದುಕೊಂಡು ಹೋಗಿಲ್ಲ ಎಂದು ಮಸ್ತಾನ್ ವಲಿ ವಾದಿಸಿದ್ದಾಗಿಯೂ, ಆದರೆ ಅದೇ ದಿನ ಸಂಜೆ ಠಾಣೆಗೆ ಸಿಸಿ ಕ್ಯಾಮೆರಾಗಳನ್ನು ತಂದು ಒಪ್ಪಿಸಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.