ಜಿಲ್ಲೆ

ಸಿಸಿ ಕ್ಯಾಮೆರಾ ಒಡೆದು ಜಡಲತಿಮ್ಮನಹಳ್ಳಿ ಬಾರ್‌ಗೆ ಕನ್ನ

Chikkaballapur

ಚಿಕ್ಕಬಳ್ಳಾಪುರ : ತಾಲೂಕಿನ ಜಡಲತಿಮ್ಮನಹಳ್ಳಿ ಸಮೀಪದ ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಗುರುವಾರ ರಾತ್ರಿ ಸಿಸಿ ಕ್ಯಾಮೆರಾ ಒಡೆದು ಹಾಕಿ, ಮದ್ಯ ಕಳವು ಮಾಡಲಾಗಿದೆ.

ಜಡಲತಿಮ್ಮನಹಳ್ಳಿ ಬಳಿ ರಂಗಸ್ವಾಮಿ ಎಂಬುವರಿಗೆ ಸೇರಿದ ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟನ್‌ನಲ್ಲಿ ಕೈ ಚಳಕ ತೋರಿರುವ ಕಳ್ಳರು, ಗೋಡೆಯಲ್ಲಿ ಕಿಂಡಿ ಕೊರೆದು ಒಳ ಪ್ರವೇಶಿಸಿದ್ದಾರೆ. ಸಿಸಿ ಕ್ಯಾಮೆರಾವನ್ನು ಒಡದು ಹಾಕಿ, ಮದ್ಯದ ಬಾಟಲ್‌ಗಳನ್ನು ದೋಚಿದ್ದು, ಸ್ಥಳಕ್ಕೆ ನಂದಿ ಗಿರಿಧಾಮ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಿಮೆ ಬ್ರಾಂಡ್ ಕಳವು : ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ದುಬಾರಿ ಬೆಲೆಯ ಬ್ರಾಂಡಗಳಿದ್ದರೂ ಕಡಿಮೆ ಬ್ರಾಂಡ್‌ಗಳ ಮಾತ್ರ ಕಳವಾಗಿರುವುದು ವಿಶೇಷ. ಖದೀಮರು ದೊಡ್ಡ ಬ್ರಾಂಡ್‌ಗಳನ್ನು ಮುಟ್ಟದೆ ಕಡಿಮೆ ಬೆಲೆಯ ಮದ್ಯ ಕಳವು ಮಾಡಿದ್ದ ಸ್ಥಳೀಯರ ಕೈವಾಡದ ಶಂಕೆ ವ್ಯಕ್ತವಾಗಿದೆ.

ಇಲ್ಲಿಯವರೆಗೂ 5 ಕಳ್ಳತನ: ಲಾಕ್ ಡೌನ್ ಬಳಿಕ ಜಿಲ್ಲೆಯಲ್ಲಿ 5 ಕಳ್ಳತನ ಪ್ರಕರಣಗಳು ವರದಿಯಾಗಿವೆ. ಚಿಕ್ಕಬಳ್ಳಾಪುರ ನಗರದಲ್ಲಿನ ಬಾಲಾಜಿ ವೈನ್ಸ್ ಮತ್ತು ಜಡಲತಿಮ್ಮನಹಳ್ಳಿಯ ಗೋಲ್ಡನ್ ಬಾರ್, ಶಿಡ್ಲಘಟ್ಟ ತಾಲೂಕಿನ ಜಿ.ವೆಂಕಟಾಪುರ ಮತ್ತು ವೈ.ಹುಣಸೇನಹಳ್ಳಿ, ಚಿಂತಾಮಣಿ ನಗರದ ಬಾರೊಂದರಲ್ಲಿ ದೋಚಿರುವ ದೂರುಗಳು ದಾಖಲಾಗಿವೆ.