ವಿಜಯಪುರ: ಹೈದ್ರಾಬಾದ್ ನಲ್ಲಿ ಇಂದು ನಡೆದ ಖೇಲೋ ಇಂಡಿಯಾ ವುಮೆನ್ಸ್ ರೋಡ್ ಸೈಕ್ಲಿಂಗ್ ಲೀಗ್ 2023 ನಲ್ಲಿ ವಿಜಯಪುರದ ಕುವರಿ ಮೇಲುಗೈ ಸಾಧಿಸಿದ್ದಾಳೆ. ಸಬ್ ಜ್ಯೂನಿಯರ್ ಗರ್ಲ್ಸ್ ವಿಭಾಗದಲ್ಲಿ 10ಕಿಲೋ ಮೀಟರ್ ನ ಇಂಡಿವಿಜುವಲ್ ಟೈಮ್ ಟ್ರಯಲ್ ರೇಸ್ ನಲ್ಲಿ ಛಾಯಾ ನಾಗನಾಥ ನಾಗಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಕರ್ನಾಟಕದ ಅನುಪಮಾ ಗುಳೇದ 14 ನಿಮಿಷ 01ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ಪ್ರಥಮ ಸ್ಥಾನದ ಗೋಲ್ಡ್ ಮೆಡೆಲ್ ಗೆದ್ದಿದ್ದಾಳೆ. ಅದರಂತೆ ಛಾಯಾ ನಾಗಶೆಟ್ಟಿ 14 ನಿಮಿಷ 13 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದು ಸಿಲ್ವರ್ ಮೆಡೆಲ್ ಪಡೆದಿದ್ದಾಳೆ. ಈ ಮೂಲಕ ವಿಜಯಪುರದ ಕೀರ್ತಿ ಪತಾಕೆಯನ್ನು ಹೈದ್ರಾಬಾದ್ ನಲ್ಲಿ ನಡೆದ ಖೇಲೋ ಇಂಡಿಯಾ ಸೈಕ್ಲಿಂಗ್ ನಲ್ಲಿ ಹಾರಿಸಿದ್ದಾಳೆ.