ಸಿರಿಗೇರಿ: ದಾಸಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಭಾರಿ ಮಳೆ ಸುರಿದ ಪರಿಣಾಮ 30 ರಿಂದ40 ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆ ಹಾನಿಯಾಗಿದೆ.
ಇನ್ನು ಕೆಲ ದಿನಗಳಲ್ಲಿ ಭತ್ತದ ಕೊಯ್ಲು ಮಾಡಬೇಕಿತ್ತು. ಆದರೆ, ಭಾರಿ ಮಳೆಯಿಂದಾಗಿ ಭತ್ತದ ಪೈರು ನೆಲಕಚ್ಚಿದೆ. ಸಿರಿಗೇರಿಯಲ್ಲಿ ಅರ್ಧ ಗಂಟೆ ಸುರಿದ ಮಳೆಯಿಂದಾಗಿ ಮೂರನೇ ವಾರ್ಡಿನಲ್ಲಿ ಚರಂಡಿ ಹಾಗೂ ಕೆರೆ ನೀರು ಕಾಲುವೆಯಂತೆ ಹರಿಯಿತು. ದ್ವಿಚಕ್ರ ವಾಹನಗಳು ಭಾಗಶಃ ಮುಳುಗಿದ್ದವು.